ಅಂಕೋಲಾ ಮೊಹರಂ ಹಬ್ಬ ಆಚರಣೆ


ಅಂಕೋಲಾ : ಪ್ರತಿ ವರ್ಷದಂತೆ ಪ್ರಸ್ತುತ ಈ ವರ್ಷ ಸಹ ಬರುವ ದಿನಾಂಕ 28-7-2023ರಂದು ಮೊಹರಂ ಹಬ್ಬ ನಡೆಸುವಂತೆ ತೀರ್ಮಾನಿಸಲಾಯಿತು.
28-7-2023ರಂದು ಸಕ್ಕರೆ ಕೊಡುವುದು (ಫಾತಿ ಕೊಡುವುದು) ಹಾಗೂ ಮರುದಿನ ದಿನಾಂಕ 29-7-2023ರಂದ ಸಂಜೆ 4 ಗಂಟೆಗೆ ಶ್ರೀ ದೇವರನ್ನು ಹಳೇ ಬಝಾರದ ರೆಹಮಾನಿಯಾ ಮಸ್ಜಿದ್ ಪಕ್ಕದಲ್ಲಿರುವ ಆಶ್ರೋಕಾನದಿಂದ ಮೆರವಣಿಗೆ ಮೂಲಕ ಹಳೇ ಬಝಾರ ಜೈಹಿಂದ್ ಲಾಡ್ಜ್ ರಸ್ತೆ, ಕಾಕರಮಠ ಬಿಲಾಲ ಮಸೀದಿ ತನಕ ತಂದು ದೇವರ ಕಾರ್ಯ ಮುಗಿಸಿ ಪುನಃ ಆಶ್ರೋಕಾನಕ್ಕೆ ತಂದು ದೇವರ ಕಾರ್ಯ ಮುಗಿಸಿ ಕಾರ್ಯಕ್ರಮ ಮುಕ್ತಾಗೊಳಿಸಲಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಕಮಿಟಿಯ ಪ್ರಮುಖರು ಈ ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿರುತ್ತಾರೆ.