ಜೊಯಿಡಾ : ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಸೈ, ಡಿಗ್ಗಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ.
ಕಳೆದ ಒಂದು ವಾರದಿಂದ ಶಿಸೈ ಗ್ರಾಮದ ಸಂಪರ್ಕಕ್ಕೆ ಕಟ್ಟಲಾದ ಸೇತುವೆ ಮುಳುಗಿದೆ. ಸ್ಥಳಿಯರು ನಿರ್ಮಿಸಿಕೊಂಡ ಕಾಲು ಸಂಕ ಒಂದು ಬದಿ ಕೊಚ್ಚಿಕೊಂಡು ಹೋಗಿದ್ದು, ಶಿಸೈ ಗ್ರಾಮ ಇದೀಗ ಸಂಪರ್ಕ ಕಳೆದುಕೊಂಡ ಪರಿಣಾಮವಾಗಿ ಅಲ್ಲಿಯ ಜನರು ದಿಗ್ಬಂದನಕ್ಕೆ ಒಳಗಾಗಿದ್ದಾರೆ. ಬಹುಬೇಡಿಕೆಯ ಮತ್ತು ಅತೀ ಅಗತ್ಯವಾಗಿ ಬೇಕಾಗಿರುವ ಸೇತುವೆಯನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಸಿಸೈ ಗ್ರಾಮದಲ್ಲಿ 20 ಕುಟುಂಬಗಳಿದ್ದು, ಪ್ರತಿ ವರ್ಷ ಸ್ಥಳಿಯರು ತೊಂದರೆ ಅನುಭವಿಸುತಿದ್ದಾರೆ.