ಹಳಿಯಾಳ : ಕಳೆದ 2-3 ವರ್ಷಗಳಿಂದ ಅಂಗಡಿ ಪರವಾನಿಗೆ ಶುಲ್ಕವನ್ನು ಪಾವತಿಸದ ಹಳಿಯಾಳ ಪಟ್ಟಣದ ಒಟ್ಟು ಆರು ಮಳಿಗೆಗಳನ್ನು ಇಂದು ಬುಧವಾರ ಬೆಳಿಗ್ಗೆ ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ್ ನೇತೃತ್ವದಲ್ಲಿ ಸೀಜ್ ಮಾಡಲಾಯ್ತು.
ಕಳೆದ 2-3 ವರ್ಷಗಳಿಂದ ಹಳಿಯಾಳ ಪುರಸಭೆಗೆ ಅಂಗಡಿ ಪರವಾನಿಗೆಯ ಶುಲ್ಕವನ್ನು ಪಾವತಿಸದೇ ಇದ್ದ ಕಾರಣಕ್ಕೆ ಈ ಆರು ಅಂಗಡಿಗಳನ್ನು ಸೀಜ್ ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.