ಹಳಿಯಾಳ : ತಾಲ್ಲೂಕಿನ ಹವಗಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೈಗಾರಿಕೆಗಳ ಅಧ್ಯಯನದ ನಿಮಿತ್ತ ಹುಬ್ಬಳ್ಳಿಯ ಪಾರ್ಲೆ ಜಿ ಕೈಗಾರಿಕೆಗೆ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದರು.
ಪಾರ್ಲಿ ಜಿ ಕೈಗಾರಿಕೆಯಲ್ಲಿ ಉತ್ಪಾದನಾ ಚಟುವಟಿಕೆ, ಪ್ಯಾಕಿಂಗ್, ನಿರ್ವಹಣೆ, ಮಾರುಕಟ್ಟೆಯ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕೈಗಾರಿಕೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ವಿದ್ಯಾರ್ಥಿಗಳ ಅಧ್ಯಯನ ಪ್ರವಾಸದ ನೇತೃತ್ವವನ್ನು ಕಾಲೇಜಿನ ಉಪನ್ಯಾಸಕಿಯರಾದ ಸಾಯಿರಾ ಬಾನು, ದ್ಯಾನೇಶ್ವರಿ, ಅನುಪಮ ವಹಿಸಿದ್ದರು.