ದಾಂಡೇಲಿಯಲ್ಲಿ ಭೀಕರ ಮಳೆ : ಮಿರಾಶಿ ಗಲ್ಲಿಯಲ್ಲಿ ಮನೆಗಳಿಗೆ ನುಗ್ಗಿದ ನೀರು

ದಾಂಡೇಲಿ : ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಸಂಜೆ ಸುರಿದ ರಣಭೀಕರ ಮಳೆಯಿಂದಾಗಿ ನಗರದ ಮಿರಾಶಿ ಗಲ್ಲಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಮಳೆ ನೀರು ಹಾಗೂ ಗಠಾರದ ನೀರು ಸೇರಿದಂತೆ ಮನೆಯೊಳಗಡೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಮನೆಯೊಳಗಿದ್ದ ಆಹಾರ ಪದಾರ್ಥ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳು ನೀರು ಪಾಲಾಗಿವೆ.