ಪ್ರತೀ ಪೋಷಕರಿಗೂ ತಮ್ಮ ಮಕ್ಕಳ ಯಶಸ್ಸನ್ನು ಕಣ್ಣಾರೆ ನೋಡಬೇಕು ಎನ್ನುವು ಕನಸು ಇದ್ದೇ ಇರುತ್ತದೆ. ಕೆಲವರಿಗೆ ಇದು ನನಸಾಗುತ್ತದೆ ಇನ್ನೂ ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನನಸಿಗೆ ಸಂಬಂಧಿಸಿದ್ದು. ತನ್ನ ಮಗ ಪತ್ರಕರ್ತನಾಗಿ ಚರ್ಚೆಯೊಂದರಲ್ಲಿ ತೊಡಗಿಕೊಂಡಿದ್ದನ್ನು ಟಿವಿ ಪರದೆಯ ಮೇಲೆ ನೋಡಿ ಸಂಭ್ರಮಿಸಿದ್ದಾಳೆ, ಭಾವುಕಳಾಗಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಹೃದಯಸ್ಪರ್ಶಿಯಾದ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಮೃದುವಾಗಿಸುತ್ತಿದೆ.
ಇನ್ಸ್ಟಾಗ್ರಾಮ್ನ ಗುಡ್ ನ್ಯೂಸ್ ಮೂವ್‌ಮೆಂಟ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹೆಮ್ಮೆಯ ತಾಯಿ! ತನ್ನ ಮಗ ಟಿವಿ ಪತ್ರಕರ್ತನಾಗಿ ಪರದೆಯ ಮೇಲೆ ಚರ್ಚಿಸುವುದನ್ನು ನೋಡಿದ ಈಕೆ ಖುಷಿ ತಡೆದುಕೊಳ್ಳಲಾಗದೆ ತನ್ನ ಸಹೋದ್ಯೋಗಿಗಳ ಮುಂದೆ ಕಣ್ಣೀರಾಗಿದ್ದಾಳೆ’ ಎಂಬ ಒಕ್ಕಣೆ ಈ ವಿಡಿಯೋಗಿದೆ. ಯಾರಾದರೂ ಹೋಗಿ ಆಕೆಯನ್ನು ತಬ್ಬಿಕೊಳ್ಳಬಾರದೆ? ಎಂದಿದ್ದಾರೆ ನೆಟ್ಟಿಗರು. ಇದು ಮಗನದ್ದಷ್ಟೇ ಅಲ್ಲ ಇಂಥ ಮಗನನ್ನು ಬೆಳೆಸಿದ ತಾಯಿಯ ಸಾಧನೆಯೂ ಹೌದು ಎಂದಿದ್ದಾರೆ ಕೆಲವರು
ಶ್ರಮಜೀವಿಯಾದ ತಾಯಿ ಮಗನನ್ನೂ ಶ್ರಮಜೀವನದೆಡೆ ಚಲಿಸುವಂತೆ ಮಾಡಿದ್ದಾಳೆ ಎಂದಿದ್ದಾರೆ ಒಬ್ಬರು. ಮಕ್ಕಳ ಉತ್ತಮ ಭವಿಷ್ಯಕ್ಕೆ ಅಪ್ಪ ಅಮ್ಮನ ಒಳ್ಳೆಯತನವೂ ಕಾರಣವಾಗುತ್ತದೆ ಎನ್ನುತ್ತದೆ ವಿಜ್ಞಾನ ಎಂದಿದ್ದಾರೆ ಇನ್ನೊಬ್ಬರು. ಈ ತಾಯಿಗೆ ಪನಾಮಾದಿಂದ ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಆನಂದಭಾಷ್ಪ! ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ ಅನೇಕರು. ಈ ವಿಡಿಯೋ ಅನ್ನು 12 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 22,000 ಜನರು ಲೈಕ್ ಮಾಡಿದ್ದಾರೆ.