ದಾಂಡೇಲಿ : ದಾಂಡೇಲಿ ತಾಲ್ಲೂಕಿನ ಬೊಮ್ಮನಹಳ್ಳಿ ಜಲಾಶಯದಲ್ಲಿ ಇಂದು ಸೋಮವಾರ ನೀರಿನ ಮಟ್ಟ 436.06 ಮೀ ಇದೆ ಎಂದು ದಾಂಡೇಲಿ ತಾಲ್ಲೂಕಾಡಳಿತ ಮಾಹಿತಿ ನೀಡಿದೆ. 438.38 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಬೊಮ್ಮನಹಳ್ಳಿ ಜಲಾಶಯದಲ್ಲಿ ಒಳ ಹರಿವು 8,441 ಕ್ಯೂಸೆಕ್ ಹಾಗೂ ಹೊರ ಹರಿವು 11,240 ಕ್ಯೂಸೆಕ್ ಇದೆ ಎಂದು ಮತ್ತು ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 59 ಮೀ.ಮೀ ಮಳೆಯಾಗಿದೆ ಎಂದು ದಾಂಡೇಲಿ ತಾಲ್ಲೂಕಾಡಳಿತ ಮಾಹಿತಿ ನೀಡಿದೆ.