ಜೋಯಿಡಾ ತಾಲ್ಲೂಕಿನ ಚಾಪೋಲಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿತ

ಜೊಯಿಡಾ: ತಾಲ್ಲೂಕಿನ ಗಾಂಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಾಪೋಲಿಯ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಸೋಮವಾರ ಕುಸಿದಿದೆ.

ಮಳೆಯ ಹಿನ್ನಲೆಯಲ್ಲಿ ಇಂದು ಶಾಲಾ/ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಇದು ನಲಿ ಕಲಿ ಕೋಣೆಯಾಗಿದ್ದು, 2೦ ವಿದ್ಯಾರ್ಥಿಗಳು ಈ ಕೊಠಡಿಯಲ್ಲಿ ಕಲಿಯುತ್ತಿದ್ದರು. 1 ರಿಂದ 7 ನೇ ತರಗತಿಯ ಒಟ್ಟು ತನಕ 51 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಇದ್ದಾರೆ.

ಶಾಲೆಗೆ ಇರುವ ಮೂರು ಕೊಠಡಿ ದುರಸ್ಥಿಯಲ್ಲಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಸರಿಯಾಗಿ ಇದ್ದ ಈ ಕೊಠಡಿಯು ಕುಸಿದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೀವ್ರ ತೊಂದರೆಯಾಗಲಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ.