ಸಿದ್ದಾಪುರ : ಮೇಯಲು ಬಿಟ್ಟ ಎಮ್ಮೆ ಚರಂಡಿಗೆ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ವಡಗೇರಿ ಸಮೀಪದ ಶಿರಳಗಿಯಲ್ಲಿ ನಡೆದಿದೆ ಚರಂಡಿಯಲ್ಲಿ ಮಳೆಯಿಂದ ರಭಸವಾಗಿ ನೀರು ಹರಿಯುತ್ತಿತ್ತು ಎಮ್ಮೆ ಚರಂಡಿ ದಾಟುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ನೀರು ಕುಡಿದು ಸತ್ತು ಹೋಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ದಯಾನಂದ ಕನ್ನ ನಾಯ್ಕ ಶಿರಳಗಿ ರವರಿಗೆ ಸೇರಿದ ಎಮ್ಮೆ ಯಾಗಿದ್ದು ಸುಮಾರು 38 ಸಾವಿರ ರೂ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ



