ಚಪ್ಪಲಿ ರಿಪೇರಿ ಮಾಡಲು ಗೂಡಂಗಡಿ ತೆರೆಯಲು ಸೂಚನೆ ನೀಡಿದ ಅಧಿಕಾರಿಗಳು

ಸಿದ್ದಾಪುರ : ಚಪ್ಪಲಿ ರಿಪೇರಿ ಮಾಡಲು ಗೂಡoಗಡಿ ತೆರೆಯಲು ಅಧಿಕಾರಿಗಳು ಸೂಚನೆ ನೀಡಿದ್ದು ಶನಿವಾರ ಅಂಗಡಿಕಾರರು ಅಂಗಡಿ ತೆರೆದು ವೃತ್ತಿ ಆರಂಭಿಸಿದರು
ಪಟ್ಟಣ ಪಂಚಾಯತ್ ದವರು ತಮಗೆ ಚಪ್ಪಲಿ ರಿಪೇರಿ ಮಾಡಲು ಗೂಡo ಗಡಿ ತೆರೆಯಲು ಅವಕಾಶ ನೀಡದೆ ಇರುವುದರಿಂದ ತಮಗೆ ಜೀವನ ನಡೆಸಲು ಅನ್ಯಾಯ ಮಾಡುತ್ತಿದೆ ನ್ಯಾಯ ಒದಗಿಸಿ ಕೊಡಬೇಕು ಎಂದು ಅಂಗಡಿ ಕಾರರ ಪರವಾಗಿ ಅಂಬೇಡ್ಕರ್ ಶಕ್ತಿ ಸಂಘದವರು ಇತೀಚೆಗೆ ತಹಸೀಲ್ದಾರ್ ರಿಗೆ ಮನವಿ ನೀಡಿದ್ದರು ಶನಿವಾರ ಪ ಪಂ ಅಧಿಕಾರಿಗಳು ಅಂಗಡಿ ಕಾರರಿಗೆ ಅಂಗಡಿ ತೆರೆಯಲು ಸೂಚನೆ ನೀಡಿದ್ದಾರೆ
ಪಟ್ಟಣ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದ ಸಮೀಪ ನಿರ್ಮಲ ಹೋಟೆಲ್ ಎದುರು ಗೂಡ ಅಂಗಡಿ ತೆರೆದು ಅಂಬೇಡ್ಕರ್ ಫೋಟೋ ಕ್ಕೆ ಪೂಜೆ ಸಲ್ಲಿಸಿ ವೃತ್ತಿ ಆರಂಭಿಸಿದರು
ತಾಲೂಕ ಅಂಬೇಡ್ಕರ್ ಶಕ್ತಿ ಸಂಘ ಉಪಾಧ್ಯಕ್ಷ
ಹಾಗೂ ಕಾಂಗ್ರೆಸ್ ಯುವ ಮುಖಂಡ ಚಂದ್ರು ಕಾನಡೆ ನೇತೃತ್ವದಲ್ಲಿ ಸಮಾಜದವರು ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಪಾರಂಪರಿಕ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣೆ ಸಮಿತಿ ಜಿಲ್ಲಾ ನಾಮ ನಿರ್ದೇಶನ ಸದಸ್ಯ
ಹಾಗೂ ತಾಲೂಕ ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ ಬೋರಕರ, ಪ್ರಮುಖರಾದ
ಕಿರಣ್ ಕಾನಡೆ, ಕಮಲಾಕರ ಜೋಗಳೇಕರ್,
ಮೋಹನ ಜೋಗಳೇಕರ್, ವೆಂಕಟೇಶ ಜೋಗಳೇಕರ್, ನೀಲಾಧರ್ ಜೋಗಳೇಕರ್
ವೆಂಕಟೇಶ್ ಹೊನ್ನಾವರಕರ್ ರಿತೇಶ್ ಮಡಗಾವಂಕರ,ಕುಮಾರ್ ನಗರೇಕರ್
ಶಾಮ್ ಜೋಗಳೇಕರ್, ದಿಲೀಪ್ ಜೋಗಳೇಕರ್, ರಾಧಾ ಜೋಗಳೇಕರ್
ರುಕ್ಮಿಣಿ ಜೋಗಳೇಕರ್ ಮುಂತಾದವರು ಉಪಸ್ಥಿತರಿದ್ದರು ಇದು ನುಡಿ ಸಿರಿ ವರದಿ ಇಂಪಾಕ್ಟ್.