ದಾಂಡೇಲಿ : ನಗರದ ಶೇಖರ್ ಆಸ್ಪತ್ರೆಯಲ್ಲಿ ಇಂದು ಭಾನುವಾರ ಬೆಳಿಗ್ಗೆ ಚಿಕ್ಕ ಮಕ್ಕಳ ಉಚಿತಾ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆಯನ್ನು ನೀಡಲಾಯ್ತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ.ಜಿ.ಡಿ.ಭಂಡಾರಿ ಇಂದಿನ ಮಕ್ಕಳೇ ಮುಂದಿನ ಈ ದೇಶದ ಆಸ್ತಿ. ಆರೋಗ್ಯವಂತ ಮಗು ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಾಣದ ಸೇನಾನಿಯಾಗಬೇಕಾದರೆ ಮಕ್ಕಳ ಆರೋಗ್ಯ ಸಂರಕ್ಷಣೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶೇಖರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶೇಖರ್ ಹಂಚಿನಾಳಮಠ ಅವರು ತಾಂತ್ರಿಕತೆ ಬೆಳೆಯುತ್ತಿದ್ದಂತೆ ನಾವು ನಮ್ಮ ಆಹಾರ ಹಾಗೂ ಜೀವನಕ್ರಮದಲ್ಲಿ ಬದಲಾಗುತ್ತಿರುವುದು ಕಳವಳಕಾರಿ ಸಂಗತಿ. ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ನೀಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವು ನೀವೆಲ್ಲರೂ ಆರೋಗ್ಯ ನಿಯಮಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಡಾ. ಮಂಜು.ಎಂ ಮತ್ತು ಡಾ.ಗೌರಿ ಶೇಖರ್ ಹಂಚಿನಾಳಮಠ ಉಪಸ್ಥಿತರಿದ್ದರು.
ಶಂಕ್ರಯ್ಯ ಹಿರೇಮಠ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದಲ್ಲಿ ಖ್ಯಾತ ಚಿಕ್ಕ ಮಕ್ಕಳ ತಜ್ಞ ಡಾ.ಮಂಜು.ಎಂ ಅವರು ಭಾಗವಹಿಸಿದ್ದರು. ಶಿಬಿರದ ಯಶಸ್ಸಿಗೆ ಶೇಖರ್ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.