ಸಿದ್ದಾಪುರ : ಶಿರಸಿಯಲ್ಲಿ ಅಸಹಾಯಕ ಅನಾಥ ಸ್ಥಿತಿಯಲ್ಲಿದ್ದ ಸುರಜ್ (ಶಿವರಾಜ) ವಿಠೋಬಾ ನಾಯ್ಕ, ಗುಡಿಗಾರ ಗಲ್ಲಿ, ಅಂಕೋಲಾ ಎನ್ನುವ ವ್ಯಕ್ತಿ ಅನಾಥಾಶ್ರಮದಲ್ಲಿ ಆಶ್ರಯ ನೀಡಲಾಯಿತು.
ಕಳೆದ ಮುರ್ನಾಲ್ಕು ದಿನದಿಂದ ಶಿರಸಿಯ ಸರಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತನಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಶಿರಸಿ ಪೋಲಿಸರು ಮುಗದುರ ನ ಪುನೀತ್ ರಾಜಕುಮಾರ್ ಅನಾಥಾಶ್ರಮಕ್ಕೆ ಕರೆ ಮಾಡಿ ಆಶ್ರಯ ನೀಡುವಂತೆ ತಿಳಿಸಿದ್ದರು
ಪೋಲಿಸ್ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಅಂಬ್ಯುಲೆನ್ಸ್ ವಾಹನದಲ್ಲಿ ಈ ವ್ಯಕ್ತಿಯನ್ನು ಅನಾಥಾಶ್ರಮಕ್ಕೆ ಕರೆತಂದು ಸೇರಿಸಿದ್ದಾರೆ.
ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿರುವ ಈ ವ್ಯಕ್ತಿ ಸರಿಯಾಗಿ ನಡೆದಾಡಲು ಆಗದ ಸ್ಥಿತಿಯಲ್ಲಿ ಇದ್ದಾನೆ . ಈತನನ್ನು ವಿಚಾರಿಸಿದಾಗ ತನ್ನ ಹೆಸರು ಸುರಜ್ (ಶಿವರಾಜ) ವಿಠೋಬಾ ನಾಯ್ಕ, ಗುಡಿಗಾರ ಗಲ್ಲಿ ಅಂಕೋಲಾ ಎಂದು ಹೇಳುತ್ತಿದ್ದಾನೆ ಹಾಗೂ ತನ್ನ ಅಣ್ಣ ಮೋಹನ ನಾಯ್ಕ, ಅಣ್ಣನ ಮನೆ ಅಂಕೋಲಾದ ತೆಂಕಣಕೇರಿ, ಅಕ್ಕನ ಹೆಸರು ಸುಶೀಲಾ, ತಂಗಿ ಹೆಸರು ನಾಗರತ್ನ ರಾಮಚಂದ್ರ ಭಟ್ ಶಿರಸಿಯ ಬಿಸ್ಲಕೊಪ್ಪ ಎಂದು ಹೇಳುತ್ತಿದ್ದಾನೆ.
ಈತನ ಸಂಬಂಧಿಕರು ಅಥವಾ ಪರಿಚಯದವರು ಇದ್ದಲ್ಲಿ ಶಿರಸಿ ನಗರ ಪೋಲಿಸ್ ಠಾಣೆ ಅಥವಾ ಆಶ್ರಮ ದ ಮುಖ್ಯಸ್ಥ ನಾಗರಾಜ್ ನಾಯ್ಕ್ 8073197439, 9481389187 ನಂಬರಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ