ಸಿದ್ದಾಪುರ : ತಾಲೂಕಿನ ಸ ಹಿ ಪ್ರಾ ಶಾಲೆ ಕಲ್ಲುರಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ ತಂಡದಿಂದ ವೈದ್ಯಕೀಯ ತಪಾಸಣೆಯನ್ನು ನಡೆಸಲಾಯಿತು ತಪಾಸಣೆ ನಡೆಸಿದ ವೈದ್ಯರು ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಸ್ವಚ್ಚತೆ ಬಗ್ಗೆ ತಿಳಿಸಿಕೊಟ್ಟರು , ಆಹಾರ ಸೇವನೆ ಕ್ರಮ, ಪೌಷ್ಟಿಕ ಆಹಾರ ಮುಂತಾದವುಗಳ ಬಗ್ಗೆ ಸಲಹೆ ನೀಡಿದರು
ಅನಾರೋಗ್ಯದ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಲು ಮಾರ್ಗದರ್ಶನ ಮಾಡಿದರು ತದನಂತರ ಕಾರ್ಯಕ್ರಮದಲ್ಲಿ. ಮಕ್ಕಳ ತೂಕ, ಎತ್ತರವನ್ನು ಅಳೆದು ಪರಿಶೀಲಿಸಿದರು ವೈದ್ಯರ ತಂಡದಲ್ಲಿ ಡಾ ನಾಡಗೇರ್,ಡಾ ಶ್ರೀದೇವಿ, ಕಾವ್ಯ, ಸರೋಜ ಇದ್ದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು