ಶಂಕಿತ ಉಗ್ರರ ಬಂಧನ ಪ್ರಕರಣ: ಪ್ರಾಥಮಿಕ ತನಿಖಾ ವರದಿಯನ್ನ ಕೇಂದ್ರಕ್ಕೆ ಕಳುಹಿಸಿದ ಸಿಸಿಬಿ

ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಾಥಮಿಕ ತನಿಖಾ ವರದಿಯನ್ನು ಸಿಸಿಬಿ ಪೊಲೀಸರು ಕೇಂದ್ರ ಗೃಹ ಇಲಾಖೆಗೆ ವರದಿ ರವಾನೆ ಮಾಡಿದ್ದಾರೆ. ಬಂಧನವಾದ ಶಂಕಿತ ಉಗ್ರರ ಸಂಖ್ಯೆ, ಹೆಸರು, ಯಾವ ಸೆಕ್ಷನ್​ನಲ್ಲಿ ಕೇಸ್ ದಾಖಲಾಗಿದೆ. ಶಂಕಿತರ ಮೇಲಿರುವ ಆರೋಪಗಳು ಹಾಗೂ ಸಂಚಿನ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ.

ಇನ್ನು ಸಿಸಿಬಿ ಪೊಲೀಸರು ಶಂಕಿತ ಉಗ್ರರ ಕಳೆದ ಎರಡು ವರ್ಷಗಳ ಕರೆಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಂಕಿತರು ಈವರೆಗೆ ಯಾರ ಯಾರ ಜೊತೆ ಸಂಪರ್ಕ ಹೊಂದಿದ್ದರು ಎಂದು ಯುಎಪಿಎ ಸೆಕ್ಷನ್ ಅಡಿಯಲ್ಲಿ ಎರಡು ವರ್ಷಗಳ ಸಿಡಿಆರ್ ಪಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೆ ಈಗಾಗಲೇ ಕೆಲವರು ಸಿಮ್ ಬದಲಿಸಿ ಹೊಸ ಸಿಮ್​ಗಳ ಖರೀದಿ ಮಾಡಿದ್ದಾರೆ. ಈ ಹೊಸ ಸಿಮ್​ನಲ್ಲಿ ಯಾರಿಗೆಲ್ಲಾ ಕರೆ ಮಾಡಿದ್ದಾರೆ ಎಂದು ಸಿಸಿಬಿ ತನಿಖೆ ನಡೆಸುತ್ತಿದೆ.

ಇದಲ್ಲದೇ ಶಂಕಿತ ಉಗ್ರರ ಮೊಬೈಲ್​ನಲ್ಲಿ ವಾಟ್ಸಪ್ ಚಾಟಿಂಗ್ ಮತ್ತು ಕರೆಗಳು ಪತ್ತೆಯಾಗಿವೆ. ಶಂಕಿತರು ವಾಟ್ಸಪ್ ಮೂಲಕ ಹಲವರಿಗೆ ಕರೆ ಮಾಡಿದ್ದಾರೆ. ಹಾಗೂ ಹಲವರ ಜೊತೆ ವಾಟ್ಸಪ್ ಚಾಟಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ವಾಟ್ಸಪ್ ಚಾಟಿಂಗ್ ಮತ್ತು ಕರೆಗಳನ್ನು ಯಾರಿಗೆ ಮಾಡಿದರು, ಯಾರ ಜೊತೆ ಮಾತಾಡಿದ್ದಾರೆ. ಯಾವ ಲೋಕೇಷನ್​ಗೆ ಕರೆಗಳು ಹೋಗಿವೆ ಎಂದು ಸಿಸಿಬಿ ತನಿಖೆ ನಡೆಸುತ್ತಿದೆ. ಕೆಲವರ ಬಳಿ ಆಂಡ್ರಾಯ್ಡ್ ಮೊಬೈಲ್ ಇದ್ರೆ ಇನ್ನೂ ಕೆಲವರ ಬಳಿ ಬೆಸಿಕ್ ಮೊಬೈಲ್ ಮಾತ್ರ ಇದೆ. ಸದ್ಯ ಶಂಕಿತರ ಬಳಿಯಿದ್ದ 12 ಮೊಬೈಲ್ ಫೋನ್ ರಿಟ್ರೀವ್ ಮಾಡಲು ಸಿಸಿಬಿ ಕಳಿಸಿದೆ.

ಇದಷ್ಟೇ ಅಲ್ಲದೇ ಶಂಕಿತ ಉಗ್ರರ ಡಿಜಿಟಲ್ ಪೇಮೆಂಟ್ ಖಾತೆಗಳಿಗೆ ಸಂದಾಯವಾಗಿರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಿಸಿಬಿ ಬಂಧಿತ ಐವರು ಶಂಕಿತರ ಬ್ಯಾಂಕ್ ಖಾತೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಕೆಲವು ಬಾರಿ ಅಗತ್ಯ ಅನುಸಾರ ಹಣ ವರ್ಗಾವಣೆ. ಐವರು ಶಂಕಿತ ಉಗ್ರರಿಗೆ ಆರೋಪಿ ಜುನೈದ್ ವಿದೇಶದಿಂದ ಹಣ ಸಂದಾಯ ಮಾಡುತ್ತಿದ್ದನು ಎಂಬ ಅಂಶ ಸಿಸಿಬಿ ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ.