ದೆಹಲಿ ವಿಮಾನ ನಿಲ್ದಾಣದಲ್ಲಿ 10 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಂಡ ಅಧಿಕಾರಿಗಳು

ದೆಹಲಿ: ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ (ಜು.22) ತಜಕಿಸ್ತಾನದ ಮೂವರು ಪ್ರಜೆಗಳಿಂದ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ . ಲಗೇಜ್‌ನಲ್ಲಿ ಇರಿಸಲಾಗಿದ್ದ ಶೂಗಳ ಒಳಗೆ ವಿದೇಶಿ ಕರೆನ್ಸಿಯನ್ನು ಬಚ್ಚಿಡಲಾಗಿತ್ತು ಎಂದು ವರದಿಯಾಗಿದೆ.

ಆರೋಪಿ ಇಸ್ತಾಂಬುಲ್‌ ವಿದೇಶಿ ಕರೆನ್ಸಿ ಜತೆಗೆ ವಿಮಾನ ಹತ್ತಲು ಮುಂದಾದಾಗ ಅಧಿಕಾರಿಗಳು ತಡೆದಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಇಸ್ತಾಂಬುಲ್‌ ಅವರ ವಸ್ತುಗಳನ್ನು ಮತ್ತು ಅವರನ್ನು ಪರಿಶೀಲನೆ ನಡೆಸಿದಾಗ ವಿದೇಶಿ ಕರೆನ್ಸಿ ಭಾರತದ ಮೌಲ್ಯದಲ್ಲಿ 10.6 ಕೋಟಿ ರೂ. (USD 7,20,000 ಮತ್ತು ಯೂರೋ 4,66,200) ವಶಪಡಿಸಿಕೊಂಡಿದ್ದಾರೆ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡು ಇಸ್ತಾಂಬುಲ್‌ ಅವರನ್ನು ತನಿಖೆ ಮಾಡಲಾಗುತ್ತಿದೆ. ಭಾರತ ಅನೇಕ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದಿದೆ. ವಿದೇಶಿ ವಸ್ತುಗಳು, ಕರೆನ್ಸಿಗಳನ್ನು ಕಳ್ಳಸಾಗಣೆ ಮಾಡುವ ಪ್ರಕರಣಗಳು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.