ಕಾರವಾರ: ವೆಂಟಿಲೇಟರ್ ಆಂಬ್ಯುಲೆನ್ಸ ಸರಿಯಾದ ಸಮಯ್ಕಕೆ ಸಿಗದೇ ಮೂರು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ಉ.ಕ ಜಿಲ್ಲೆಯ ಕಾರವಾರ ವೈದ್ಯಕೀಯ ಕಾಲೇಜಿನ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ..
ಕಾರವಾರ ತಾಲೂಕಿನ ಕಿನ್ನರ ಮೂಲದ ರಾಜೇಶ ಎನ್ನುವವರ ಮೂರು ತಿಂಗಳ ಮಗು ರಾಜನ್ ಮೃತಪಟ್ಟ ಮಗುವಾಗಿದ್ದು, ಐದು ವರ್ಷಗಳ ನಂತರ ಗಂಡು ಮಗು ಜನಿಸಿತ್ತು. ಮೂರು ದಿನದಿಂದ ಚಿಕಿತ್ಸೆ ನೀಡಿದರೂ ಮಗು ಸ್ಪಂದಿಸದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಕೊಂಡೊಯ್ಯಲು ವೈದ್ಯರು ಶಿಪಾರಸ್ಸು ಮಾಡಿದ್ದರು. ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ ಮಗುವನ್ನು ವೆಂಟಿಲೇಟರ್‌ನಲ್ಲಿ ಸಾಗಿಸಬೇಕಿತ್ತು. ಆದರೆ ಕ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿರುವ ಮಕ್ಕಳ ವಿಭಾಗದಲ್ಲಿ ಮೂರು ತಿಂಗಳ ಮಗುವನ್ನು ಸಾಗಿಸಲು ವೆಂಟಿಲೇಟರ್ ಆಂಬ್ಯುಲೆನ್ಸ ಇಲ್ಲದ ಕಾರಣ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲು ವಿಳಂಭವಾಗಿತ್ತು.
ಪೋಷಕರು ಹೆಚ್ಚಿನ ಹಣ ನೀಡಿ ಉಡುಪಿಯಿಂದ ವೆಂಟಿಲೇಟರ್ ಆಂಬ್ಯುಲೆನ್ನು ತರಿಸಿದ್ದು, ಆಂಬ್ಯುಲೆನ್ನು ಬರುವ ಮುನ್ನ ಮಗು ಸಾವನ್ನಪ್ಪಿದೆ.
ಇನ್ನೂ ಆಸ್ಪತ್ರೆಯಲ್ಲಿ ಸೂಕ್ತ ಆಂಬ್ಯುಲೆನ್ಸ್ ಇಲ್ಲದೇ ಮಗುವೊಂದು ಬಲಿಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಹೃದಯವಿದ್ರಾವಕ ಘಟನೆ ಬೆನ್ನಲ್ಲೆ ಸ್ಥಳೀಯ ಜನರು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದರು….