೨೦೨೨-೨೩ ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ೨೦೨೨-೨೩ ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಬಾಲ ಭವನದಲ್ಲಿ ನಡೆಯಿತು.
ಕಾರ್ಯ ಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಐ ನಾಯ್ಕ್
ಮಾತನಾಡಿ ನಮ್ಮ ಭಾಷೆಯ ಪ್ರೌಢಿಮೆ ಅಪಾರವಾದದ್ದು ಮಾತೃಭಾಷೆಯಲ್ಲಿ ಶಕ್ತಿ ಇದೆ ಕನ್ನಡ ಮಾಧ್ಯಮದಿಂದ ಹೆಚ್ಚು ಅಧಿಕಾರಿಗಳು ಸಾಹಿತಿಗಳು ರಾಜಕಾರಣಿಗಳು ಆಗಿದ್ದಾರೆ ಎಸ್ ಎಲ್ ಸಿ ಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ ಎಲ್ಲರಿಗೂ ಇಲಾಖೆಯ ಪರವಾಗಿ ಅಭಿನಂದನೆಗಳು ಎಂದರು.
ತಾಲೂಕು ೬ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್ ಕೆ ಹೊನ್ನೇಗುಂಡಿ ಅಭಿನಂದನಾ ನುಡಿಗಳನ್ನಾಡಿದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಹಿತ್ಲ ಕೊಪ್ಪ ಮಾತನಾಡಿ ಮೋಬೈಲ್ ದಿಂದ ದೂರ ಇರಿ, ಜ್ಞಾನಾರ್ಜನೆ ಮಾತ್ರ ಬಳಸಿ, ಐಎಎಸ್, ಕೆಎಎಸ್ ಪರೀಕ್ಷೆ ಕನ್ನಡ ದಲ್ಲಿ ಬರೆಯಲು ಅವಕಾಶ ಇದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಎನ್ ವಾಸರೆ ಅಧ್ಯಕ್ಷತೆ ವಹಿಸಿ ಅಭಿನಂದನ ನುಡಿಗಳನ್ನು ಆಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ್ ನಾಯ್ಕ್ ಬಾಶಿ ಉಪಸ್ಥಿತರಿದ್ದರು
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ 2023ರ ಶೈಕ್ಷಣಿಕ ವರ್ಷದಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳನ್ನು ಮತ್ತು ಅವರ ಶಿಕ್ಷಕರನ್ನು ಅಭಿನಂದಿಸಲಾಯಿತು