ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

ಕುಮಟಾ: ತಾಲೂಕಿನ ಗೋಕರ್ಣ ಚೌಡಗೇರಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಗುಂಡಬಾಳದ ಸಂತೆಪೇಟೆಯ ಗೌರಿ ಸೋಮಯ್ಯ ಗೌಡ (75) ಮೃತ ಮಹಿಳೆಯಾಗಿದ್ದು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಕೆಲ ದಿನಗಳಿಂದ ಗೋಕರ್ಣ ಸುತ್ತಮುತ್ತಲಿನ ಊರುಗಳಲ್ಲಿ ತಿರುಗಾಡುತ್ತಿದ್ದಳು. ಗುರುವಾರ ಬೆಳಿಗ್ಗೆ ಚೌಡಗೇರಿಯ ಬಳಿ ಮೃತಪಟ್ಟಿದ್ದು, ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.