ನವದೆಹಲಿ (ಜು.19): ಸಿಧಿಯಲ್ಲಿ ಆದ ಘಟನೆಯ ಬಳಿಕ ಮಧ್ಯಪ್ರದೇಶದಲ್ಲಿ ಮತ್ತೊಂದು ಮೂತ್ರ ಹಗರಣ ಬಯಲಿಗೆ ಬಂದಿದೆ. ಮಂಡ್ಲಾದ ಶಾಲೆಯಲ್ಲಿ ವಿದ್ಯಾರ್ಥಿನಿಯರು ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್ ಮಾಡಲಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಯರು ನೀರು ಕುಡಿಯಲು ಬಾಟಲಿ ಎತ್ತಿದಾಗ ಅದರಿಂದ ಮೂತ್ರದ ವಾಸನೆ ಬರುತ್ತಿತ್ತು. ಆ ಬಳಿಕ ಶಿಕ್ಷಕರಿಗೆ ಈ ಕುರಿತಾಗಿ ದೂರು ನೀಡಿದ್ದಾರೆ. ಶಾಲೆಯ ಐವರು ವಿದ್ಯಾರ್ಥಿಗಳ ಮೇಲೇಯೇ ಇವರು ಆರೋಪ ಮಾಡಿದ್ದಾರೆ. ಶಾಲೆ ಮುಗಿಸಿ ಬಂದ ಬಳಿಕ ಕುಟುಂಬದವರಿಗೂ ಇದರ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಬಿಚಿಯಾದ ಲಾಫ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೂರು ನೀಡಿದ ಮೂವರು ವಿದ್ಯಾರ್ಥಿನಿಯರು ಹೈಯರ್ ಸೆಕೆಂಡರಿ ಶಾಲೆಯಲ್ಲಿ 11ನೇ ತರಗತಿಯ ಕಲಾ ವಿಭಾಗದಲ್ಲಿ ಓದುತ್ತಿದ್ದಾರೆ. ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಇಂಗ್ಲಿಷ್ ಪೀರಿಯಡ್‌ಗೆ ಹಾಜರಾಗಲು ಮೂವರೂ ತರಗತಿಗೆ ತೆರಳಿದ್ದರು. ಈ ವೇಳೆ ತಮ್ಮ ಬ್ಯಾಗ್ ಹಾಗೂ ನೀರಿನ ಬಾಟಲಿಯನ್ನು ಇನ್ನೊಂದು ತರಗತಿಯಲ್ಲಿ ಇಟ್ಟು ಹೋಗಿದ್ದರು
ವಿದ್ಯಾರ್ಥಿನಿಯರು ಇಂಗ್ಲಿಷ್ ತರಗತಿಗೆ ಹಾಜರಾಗಿ ತಮ್ಮ ತರಗತಿಗೆ ಹಿಂತಿರುಗಿದಾಗ, ವಿದ್ಯಾರ್ಥಿನಿಯೊಬ್ಬಳು ಬಾಟಲಿಯಿಂದ ನೀರು ಕುಡಿದಿದ್ದಾಳೆ. ಈ ವೇಳೆ ನೀರಿನ ಟೇಸ್ಟ್ ವಿಚಿತ್ರ ಎನಿಸಿದೆ. ಆ ನಂತರ ಎಲ್ಲರೂ ಬಾಟಲಿಯನ್ನು ಮೂಸಿ ನೋಡಿದಾಗ ಅದರಿಂದ ಮೂತ್ರದ ವಾಸನೆ ಬರುತ್ತಿತ್ತು. ಇರ ಬೆನ್ನಲ್ಲಿಯೇ ನೀರು ಕುಡಿದ ವಿದ್ಯಾರ್ಥಿನಿ ಬಾಟಲಿಯನ್ನು ಎಸೆದಿದ್ದರೆ, ಉಳಿದವರು ದೂರು ನೀಡಲು ಹಾಗೆಯೇ ಇರಿಸಿಕೊಂಡಿದ್ದರು.
ಆ ಬಳಿಕ ವಿದ್ಯಾರ್ಥಿನಿಯರು ಶಾಲೆಯ ಶಿಕ್ಷಕರಿಗೆ ದೂರು ನೀಡಿದ್ದಾರೆ. ಅವರು ತರಗತಿಯಲ್ಲಿ ಕೆಲವು ವಿದ್ಯಾರ್ಥಿಗಳನ್ನು ನೋಡಿದ್ದೇವೆ ಎಂದು ಹೇಳಿದರು ದೂರಿನ ನಂತರ, ಶಿಕ್ಷಕರು ಆರೋಪಿ ವಿದ್ಯಾರ್ಥಿ ಮತ್ತು ಸಂತ್ರಸ್ತ ವಿದ್ಯಾರ್ಥಿನಿಯನ್ನು ಮರುದಿನ ತಮ್ಮ ಪೋಷಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. ವಿದ್ಯಾರ್ಥಿನಿಯರು ಮನೆಗೆ ತೆರಳಿ ಘಟನೆಯನ್ನು ಸಂಬಂಧಿಕರಿಗೆ ತಿಳಿಸಿದ್ದಾರೆ. ವಿದ್ಯಾರ್ಥಿನಿಯರ ಕುಟುಂಬದವರೊಂದಿಗೆ ಗ್ರಾಮಸ್ಥರು ಕೂಡ ಶಾಲೆಗೆ ಬಂದಿದ್ದರು. ಘಟನೆಯಿಂದ ಸಿಟ್ಟಾಗಿದ್ದ ಎಲ್ಲರೂ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳುಗೆ ಮಾಹಿತಿ ನೀಡಲಾಯಿತು. ಇದಾದ ನಂತರ ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತ ವಿಜಯ್ ಟೇಕಂ ಮತ್ತು ಅಂಜನಿಯಾ ನಾಯಬ್ ತಹಸೀಲ್ದಾರ್ ಸಾಕ್ಷಿ ಶುಕ್ಲಾ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಲಾಗಿದೆ. ಆ ಬಳಿಕ ಬಮ್ಹಾನಿ ಬಂಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಹಶೀಲ್ದಾರ್ ಸಾಕ್ಷಿ ಶುಕ್ಲಾ ಈ ಮಾಹಿತಿ ನೀಡಿದ್ದು, ಸೋಮವಾರ ಈ ಘಟನೆ ನಡೆದಿದೆ. ಶಾಲೆಯ ಇಬ್ಬರು ವಿದ್ಯಾರ್ಥಿನಿಯರ ನೀರಿನ ಬಾಟಲಿಯಲ್ಲಿ ಬೇರೆ ವಸ್ತು ಪತ್ತೆಯಾಗಿದೆ. ಇದು ಏನು ಅನ್ನೋದರ ತನಿಖೆ ನಡೆಯಿತ್ತಿದೆ. ಗ್ರಾಮದವರು ಹಾಗೂ ವಿದ್ಯಾರ್ಥಿನಿಯರ ಕುಟುಂಬದರು ಪ್ರಿನ್ಸಿಪಾಲ್‌ಗೆ ಮಾಹಿಡಿ ನೀಡಿದ್ದರು. ಅದರೊಂದಿಗೆ ಹಿಂದಿನ ಕೆಲವು ಪ್ರಕರಣಗಳ ಬಗ್ಗೆಯೂ ತಿಳಿಸಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತನಿಖೆಯ ನಂತರವೇ ಯಾವುದೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತ ವಿಜಯ್ ಟೇಕಂ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.ತನಿಖೆಯ ನಂತರವಷ್ಟೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬಾಟಲಿಯಲ್ಲಿ ಏನಿದೆ? ತನಿಖೆಯ ನಂತರ ಇದನ್ನು ಖಚಿತಪಡಿಸಬಹುದು. ತನಿಖೆಯಲ್ಲಿ ಏನೆಲ್ಲಾ ಸತ್ಯಾಂಶ ಹೊರಬೀಳಲಿದೆ ಎನ್ನುವುದನ್ನು ತಿಳಿಸಲಾಗುವುದು ಎಂದಿದ್ದಾರೆ.