ಯಮುನಾ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆ! ದೆಹಲಿಯ ಹಲವು ಭಾಗ ಜಲಾವೃತ

ದೆಹಲಿ: ರಾಷ್ಟ್ರ ರಾಜಧಾನಿ ಯಮುನಾ ನದಿಯ ನೀರಿನ ಮಟ್ಟದ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೆನ್ನೆ (ಸೋಮವಾರ) ರಾತ್ರಿ 11 ಗಂಟೆಗೆ ಸುರಿದ ಭಾರಿ ಮಳೆಗೆ ನದಿಯ ನೀರಿನ ಮಟ್ಟ 2026.01ಕ್ಕೆ ತಲುಪಿದೆ. ಅಧಿಕಾರಿಗಳ ಪ್ರಕಾರ ಇದು ಅಪಾಯದ ಮಟ್ಟ ಎಂದು ಹೇಳಲಾಗಿದೆ. ಈ ಹಿಂದೆ ಅಂದರೆ ಭಾನುವಾರ ನೀರಿನ ಮಟ್ಟ ಇಳಿದಿತ್ತು. ಆದರೆ ಸೋಮವಾರ ರಾತ್ರಿ ಸುರಿದ ಮಳೆಗೆ ನೀರಿನ ಮಟ್ಟ ಹೆಚ್ಚಾಗಿದೆ. ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ಯಮುನೆಯ ನೀರಿನ ಮಟ್ಟ 205.48 ಮೀಟರ್‌ ದಾಟಿತ್ತು. ಇದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಜಲಾವೃತಗೊಂಡಿತ್ತು. ಕೇಂದ್ರ ಜಲ ಆಯೋಗ 205.33 ನಷ್ಟು ನೀರಿನ ಮಟ್ಟ ಹೆಚ್ಚಾದರೆ ದೆಹಲಿಗೆ ಅಪಾಯ ತಪ್ಪಿದಲ್ಲ ಎಂದು ಹೇಳಿದರು. ಆದರೆ ಇದನ್ನು ಮೀರಿ 205.48ನಷ್ಟು ನೀರಿನ ಮಟ್ಟ ಹೆಚ್ಚಾಗಿತ್ತು.

ಕೇಂದ್ರ ಜಲ ಆಯೋಗದ ಪ್ರಕಾರ, ಅಪಾಯದ ರೇಖೆಯನ್ನು ದಾಟಿ ಬಂದಿದೆ. ದೆಹಲಿಯ ಅನೇಕ ಕಡೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದು, ಭಾನುವಾರ ಕಡಿಮೆ ಇದ್ದ ನೀರಿನ ಮಟ್ಟು ಸೋಮವಾರ ಸುರಿದ ಭಾರಿ ಮಳೆಗೆ ಮತ್ತೆ ಹೆಚ್ಚಾಗಿದೆ.

ಇನ್ನೂ ಹರಿಯಾಣದ ಕೆಲವು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಯಮುನಾ ನದಿಯ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಈ ಕಾರಣದಿಂದ ದೆಹಲಿ ಸರ್ಕಾರವು ಸ್ಥಾಪಿಸಿದ ಪರಿಹಾರ ಶಿಬಿರಗಳಲ್ಲಿ ವಾಸಿಸುವ ಜನರು ಪ್ರವಾಹ ಪೀಡಿತ ಮನೆಗಳಿಗೆ ಹಿಂತಿರುಗದಂತೆ ದೆಹಲಿ ಸಚಿವ ಅತಿಶಿ ಸಲಹೆ ನೀಡಿದ್ದಾರೆ.

ಇನ್ನೂ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾದ ಕಾರಣ ದೆಹಲಿಯ ಕೆಲವೊಂದು ಕಡೆ ಸಾರಿಗೆ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ನೀರಿನ ಮಟ್ಟ ಕಡಿಮೆಯಾದ ಕಾರಣ ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ತನ್ನ ಕೆಲವು ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿದೆ. ಆದರೆ ಭಾರೀ ಸರಕು ವಾಹನಗಳ ಪ್ರವೇಶವನ್ನು ಸಿಂಗು ಗಡಿಯಲ್ಲಿ ನಿರ್ಬಂಧಿಸಲಾಗುತ್ತದೆ.

ಇದಲ್ಲದೆ, ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಿಂದ ದೆಹಲಿಯ ಐಎಸ್‌ಬಿಟಿ ಕಾಶ್ಮೀರಿ ಗೇಟ್‌ಗೆ ಬರುವ ಅಂತಾರಾಜ್ಯ ಬಸ್‌ಗಳು ಸಿಂಗು ಗಡಿಯನ್ನು ಮಾತ್ರ ಬರಲು ಸಾಧ್ಯ ಎಂದು ಹೇಳಲಾಗಿದೆ.