ಭಟ್ಕಳದ ಮಖ್ದೂಮ್ ಕಾಲೋನಿ ಮನೆಯಲ್ಲಿ ಬೆಂಕಿ – ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿ

ಭಟ್ಕಳದ ಮಖ್ದೂಮ್ ಕಾಲೋನಿಯೊಂದರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭಟ್ಕಳದ ಮಖ್ದೂಮ್ ಕಾಲೋನಿಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಎಲೆಕ್ಟ್ರಾನಿಕ್ ವಸ್ತುಗಳು, ಮೂರು ಕಪಾಟುಗಳು, ಹಾಸಿಗೆ, ವಿವಿಧ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಯಾವುದೇ ಕುಟುಂಬ ಸದಸ್ಯರು ಮನೆಯಲ್ಲಿ ಇರದ ಕಾರಣ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪುರಸಭೆ ಮಾಜಿ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಸಹೋದರಿ ಮುಬಸ್ಶಿರಾ ಯೂಸುಫ್ ಅವರ ಮನೆಯೇ ಬೆಂಕಿಗಾಹುತಿಯಾಗಿದ್ದು, ಹಿಂದಿನ ದಿನವಷ್ಟೆ ಮನೆಯ ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು ಎನ್ನಲಾಗಿದೆ

ಮನಯಿಂದ ಹೊಗೆ ಬರುತ್ತಿರುವುದನ್ನು ನೋಡಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಸಹಾಯಕ್ಕೆ ಬಂದಿದ್ದಾರೆ. ಮೊದಲು ಮನೆಯಿಂದ ಗ್ಯಾಸ್ ಸಿಲಿಂಡರ್ ತೆಗೆದು ಪಂಪ್ ಸೆಟ್ ಮೋಟಾರ್ ಬಳಸಿ ಬೆಂಕಿಯನ್ನು ನಿಯಂತ್ರಿಸಿ ಮತ್ತಷ್ಟು ಹರಡುವುದನ್ನು ತಪ್ಪಿಸಿದ್ದಾರೆ. ಮಾಹಿತಿ ಪಡೆದ ಹೆಸ್ಕಾಂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ರು.