ಅಂಕೋಲಾ : ಕರ್ನಾಟಕ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಪ್ರಸಿದ್ದ ಯಕ್ಷಗಾನ ಕಲಾವಿದ ವಿಠೋಬ ನಾಯಕ್ ವಂದಿಗೆ
ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶನಿವಾರ ಕನ್ನಡ ಭವನದಲ್ಲಿ ಜರುಗಿದ ಸಭೆಯಲ್ಲಿ ವಿಠೋಬ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಷ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಪ್ರೊ. ಕೆ.ವಿ.ನಾಯಕ, ಯಕ್ಷಗಾನ ಕ್ಷೇತ್ರದಲ್ಲಿ ಬಲವಾದ ಹೆಜ್ಜೆ ಗುರುತು ಇಟ್ಟ ಅಗ್ರಗಣ್ಯ ಕಲಾವಿದರಲ್ಲಿ ವಿಠೋಬ ನಾಯಕರು ಓರ್ವರು. ಕಲೆಯ ಜೊತೆಗೆ ಸಮಾಜದ ಮಧ್ಯೆಯೂ ಸಾಮರಸ್ಯದ ಬದುಕು ನಡೆಸಿದ ಜೀವ ಎಂದು ಸ್ಮರಿಸಿದರು.
ಇನ್ನೋರ್ವ ಸದಸ್ಯ ವಿಠ್ಠಲ ಗಾಂವಕರ್ ಮಾತನಾಡಿ, ವಿಠೋಬ ನಾಯಕರ ಕಲಾ ಕೊಡುಗೆಯನ್ನು ಸ್ಮರಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಮಹೇಶ ನಾಯಕ ಸ್ವಾಗತಿಸಿ ನಿರ್ವಹಿಸಿದರು. ಖಜಾಂಚಿ ಎಸ್.ಆರ್. ನಾಯಕ ವಂದಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಹೊನ್ನಮ್ಮ ನಾಯಕ, ಪ್ರಮುಖರಾದ ಆರ್.ವಿ.ಕೇಣಿ, ಪ್ರಭಾಕರ ಬಂಟ, ಎಂ.ಎಂ. ಕರ್ಕಿಕರ್, ಶ್ರೀಧರ ಬಿ. ನಾಯಕ, ಡಾ. ವಿನಾಯಕ ಹೆಗಡೆ, ಪ್ರವೀರ ನಾಯಕ ಇದ್ದರು.