ಉತ್ತಮ ಪರಿಸರ ನಿರ್ಮಾಣವಾಗಲು ಗಿಡಮರಗಳನ್ನು ಬೆಳೆಸಬೇಕು – ಕೆ.ಸಿ.ವರ್ಗಿಸ್

ಹೊನ್ನಾವರ: ನಮ್ಮ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಾಣ ಮಾಡಬೇಕಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ.ವರ್ಗಿಸ್ ಅಭಿಪ್ರಾಯಪಟ್ಟರು. ಪಟ್ಟಣದ ಸೆಂಥ್ ಥಾಮಸ್ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಬುಧವಾರ ನಡೆದ ವನಮಹೊತ್ಸವ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಗಿಡ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಕೃತಿಯ ಸಮತೋಲನ ಕಾಪಾಡಿಕೊಂಡು ಮಣ್ಣು ಹಾಗೂ ಮನುಷ್ಯನ ಸಂಬಂಧ ಗಟ್ಟಿಯಾಗಿಸಲು ವನಮಹೊತ್ಸಹ ಆಚರಿಸುತ್ತಿದ್ದೇವೆ. ಲಯನ್ಸ್ ಕ್ಲಬ್ ಹಲವು ವರ್ಷದಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇಂದು ಎಲ್ಲರ ಸಹಕಾರದಿಂದ ಯಶ್ವಸಿಯಾಗಿಸಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಸುಲೆಮೆನ್ ಬೈಲೂರು ಮಾತನಾಡಿ ಲಯನ್ಸ್ ವತಿಯಿಂದ ಶಾಲಾವರಣದಲ್ಲಿ ಗಿಡ ನೆಡುವ ಜೊತೆ ವಿದ್ಯಾರ್ಥಿಗಳಿಗೆ ಗಿಡ ವಿತರಿಸುವ ಮೂಲಕ ಪರಿಸರ ಪ್ರೇಮವನ್ನು ಇನ್ನಷ್ಟು ಗಟ್ಟಿಯಾಗಿಸಿದೆ ಎಂದರು.

ಶಾಲಾ ಆವರಣದ ಸುತ್ತಲೂ ಲಯನ್ಸ ಸದಸ್ಯರು ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯ ನಡೆಸಿದರು. ಈ ವೇಳೆ ಶಾಲೆಯ ಮ್ಯಾನೇಜರ್ ಫಾದರ್ ಲಿಜೋ, ಲಯನ್ಸ ಕಾರ್ಯದರ್ಶಿ ರಾಜೇಶ ಸಾಳೆಹಿತ್ತಲ್ ಮತ್ತಿತರಿದ್ದರು.