ಯಲ್ಲಾಪುರ: ಪರಿಶಿಷ್ಟ ಜಾತಿಯವರಲ್ಲದವರು ಸರ್ಕಾರಕ್ಕೆ ವಂಚಿಸಿ ಪರಿಶಿಷ್ಟಜಾತಿಯ ಮೀಸಲು ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಾಲೂಕಾ ಪರಿಶಿಷ್ಟ ಜಾತಿಯ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಬುಧವಾರ ತಹಶಿಲ್ದಾರ ಶ್ರೀ ಕೃಷ್ಣ ಕಾಮ್ಕರ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಕೆಲವರು ಪರಿಶಿಷ್ಟರಲ್ಲದಿದ್ದರೂ, ನಾವು ಪರಿಶಿಷ್ಠ ಜಾತಿಯವರೆಂದು ನೈಜ ಪರಿಶಿಷ್ಠರಿಗೆ ಸಂಬಂಧಿಸಿದ ಮೀಸಲು ಕಾಮಗಾರಿಯನ್ನು ಟೆಂಡರ್ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ.
ಹಳೆಯ ಜಾತಿ ಪ್ರಮಾಣ ಪತ್ರವನ್ನೇ ಬಳಸುತ್ತಿದ್ದು, ವಿದ್ಯುನ್ಮಾನ ಸಹಿ ಹಾಗೂ ಆರ್.ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣಪತ್ರ ಬಳಸದೇ ರಾಜಾರೋಷವಾಗಿ ದಲಿತರ ಮೀಸಲು ಅನುದಾನದ ಕಾಮಗಾರಿ ನಿರ್ವಹಿಸುತ್ತದ್ದಾರೆ. ಇದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯ ವಾಗುತ್ತಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಿ ಎಂದು ಮನವಿಯಲ್ಲಿಆಗ್ರಹಿಸಿದ್ದಾರೆ.
ಈ ಸಂರ್ಭದಲ್ಲಿ ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗೇಶ ಬೋವಿವಡ್ಡರ್, ಉಪಾಧ್ಯಕ್ಷ ಪರಶುರಾಮ ಮದನೂರು, ಗೋವಿಂದ ಬಸಾಪುರ ಮುಂತಾದವರು ಇದ್ದರು.