ಹಳಿಯಾಳ ಪಟ್ಟಣದ ಶ್ರೀ.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ಶ್ರೀ.ನಾಮದೇವ ಮಹಾರಾಜರ 674ನೇ ಪುಣ್ಯತಿಥಿಯ ಆಚರಣೆ

ಹಳಿಯಾಳ : ಪಟ್ಟಣದ ಜವಳಿಗಲ್ಲಿಯಲ್ಲಿರುವ ಶ್ರೀ.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಶ್ರೀ.ನಾಮದೇವ ಶಿಂಪಿ ದೈವಕಿ ಸಮಾಜದ ಆಶ್ರಯದಡಿ ಸಂತ ಶಿರೋಮಣಿ ಶ್ರೀ.ನಾಮದೇವ ಮಹಾರಾಜರ 674ನೇ ಪುಣ್ಯತಿಥಿಯ ಆಚರಣೆಯು ಅತ್ಯಂತ ಶ್ರದ್ಧಾಭಕ್ತಿಯಿಂದ ಮುಂದುವರಿದಿದೆ.

ಜುಲೈ: 12 ರಿಂದ ಆರಂಭಗೊಂಡ ಕಾರ್ಯಕ್ರಮವು ಇಂದು ಸಂಜೆ ಪಲ್ಲಕಿ ಉತ್ಸವದ ಮೂಲಕ ಸಂಪನ್ನಗೊಳ್ಳಲಿದೆ. ಪ್ರತಿದಿನ ವಿವಿಧ ಪೂಜಾ ಕೈಕರ್ಯಗಳೊಂದಿಗೆ ಭಜನಾ ಕಾರ್ಯಕ್ರಮ ಮತ್ತು ಶ್ರೀ.ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರಗುತ್ತಿದೆ. ಇಂದು ವಿವಿಧ ಪೂಜಾ ಕಾರ್ಯಕ್ರಮಗಳ ಜೊತೆಯಲ್ಲಿ ಶ್ರೀ.ಪಾರಾಯಣ ಕಾರ್ಯಕ್ರಮವು ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಶ್ರೀ.ನಾಮದೇವ ಶಿಂಪಿ ದೈವಕಿ ಸಮಾಜದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಶ್ರಮಿಸುತ್ತಿದ್ದಾರೆ.