ಸಿದ್ದಾಪುರ:- ಶಿಕ್ಷಕರ ಸೇವೆ ಅಮೋಘ ವಾದುದ್ದು. ಮಕ್ಕಳಿಗೆ ತಮ್ಮಮುಂದಿನ ಜೀವನವನ್ನು ಉತ್ತಮವಾಗಿಸಿಕೊಳ್ಳಲು ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ ವಾಗಿರುತ್ತದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಕಡಕೇರಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಕಡಕೇರಿಯಲ್ಲಿ 24 ವರ್ಷ ಗಳ ಸುಧೀರ್ಘ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶಿಕ್ಷಕಿ ಮಂಜುಳಾ ಪಟಗಾರ ರವರನ್ನು ಸನ್ಮಾನಿಸಿ ಬಿಳ್ಕೋಟ್ಟು ಮಾತನಾಡಿದರು.
ಅಂತೆಯೇ ಮಂಜುಳಾ ಪಟಗಾರ ರವರು ಸೇವೆಗೆ ಸೇರಿದ ದಿನದಿಂದ ಇಲ್ಲಿಯ ವರೆಗೆ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಸೇವೆ ಸಲ್ಲಿಸುವವರು ವಿರಳ. ಅವರು ತಮ್ಮ ಸೇವಾವಧಿಯಲ್ಲಿ ಮಕ್ಕಳಿಗೆ ಆಟ ಪಾಠಗಳನ್ನು ಉತ್ತಮವಾಗಿ ಬೋಧಿಸಿದ್ದಾರೆ. ಮುಂದಿನ ಅವರ ಸೇವೆಯ ದಿನಗಳು ಉತ್ತಮವಾಗಿರಲಿ ಎಂದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ಎಚ್ ಟಿ ವಾಸು ಮಾತನಾಡಿ ಶಾಲೆಯ ಬಗ್ಗೆ ಮಂಜುಳಾ ಪಟಗಾರ ರವರಿಗೆ ಇದ್ದ ಕಾಳಜಿ, ಅವರು ಮಕ್ಕಳೊಂದಿಗಿನ ಒಡನಾಟ ವನ್ನು ನೆನಪಿಸಿಕೊಂಡು ಶುಭ ಹಾರೈಸಿದರು.
ಸೀತಾರಾಮ ನಾಯ್ಕ, ದಯಾನಂದ ನಾಯ್ಕ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುಳಾ ಪಟಗಾರ ತಮ್ಮ ಹಾಗೂ ಮಕ್ಕಳ ಬಾಂಧವ್ಯ, ಪಾಲಕರೊಂದಗಿನ ಒಡನಾಟ, ಹಾಗೂ ಸಹೋದ್ಯೋಗಿಗಳೊಂದಗಿನ, ಗ್ರಾಮದ ಅವಿನಾಭಾವ ಸಂಬಂಧ ವನ್ನು ನೆನೆದು ತಮ್ಮ ಕೃತಜ್ಞತಾ ಭಾವವನ್ನು ಅರ್ಪಿಸಿ ದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಮುಖ್ಯೋದ್ಯಾಪಕರು, ಸಹ ಶಿಕ್ಷಕರು, ಪಾಲಕರು, ಮಕ್ಕಳು ಉಪಸ್ಥಿತರಿದ್ದು, ತಮ್ಮ ನೆಚ್ಚಿನ ಶಿಕ್ಷಕರನ್ನು ಆತ್ಮೀಯ ವಾಗಿ ಬೀಳ್ಕೋಟ್ಟರು.