ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದ ಬಿ.ಸಿ.ಎ ತರಗತಿ ಆರಂಭ : ಡಾ.ಎಂ.ಡಿ.ಒಕ್ಕುಂದ

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದ ಹೊಸದಾಗಿ ಬಿ.ಸಿ.ಎ ಕೋರ್ಸ್ ಆರಂಭವಾಗಲಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರು ತಿಳಿಸಿದ್ದಾರೆ.

ಅವರು ಇಂದು ಗುರುವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಶಾಸಕರಾದ ಆರ್.ವಿ. ದೇಶಪಾಂಡೆ ಅವರ ವಿಶೇಷ ಪ್ರಯತ್ನದಡಿಯಲ್ಲಿ ಬಿ.ಸಿ.ಎ ಕೋರ್ಸ್’ಗೆ ಸರಕಾರ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಮಂಜೂರಾತಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಬಿ.ಸಿ.ಎ ಪದವಿ ಶಿಕ್ಷಣವನ್ನು ಪಡೆಯಲು ಆಸಕ್ತರಿರುವ ವಿದ್ಯಾರ್ಥಿಗಳು ಈ ಕೂಡಲೇ ಕಾಲೇಜಿಗೆ ಬಂದು ಅರ್ಜಿಯನ್ನು ಸಲ್ಲಿಸುವಂತೆ ವಿನಂತಿಸಿರುವ ಡಾ.ಎಂ.ಡಿ ಒಕ್ಕುಂದ ಅವರು 40 ಸೀಟ್ ಗಳು ಮಾತ್ರ ಲಭ್ಯವಿದ್ದು, ಮೆರಿಟ್ ಹಾಗೂ ಮೀಸಲಾತಿಯ ಪ್ರಕಾರ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಡಾ.ಎಂ.ಡಿ.ಒಕ್ಕುಂದ ಅವರು ತಿಳಿಸಿದ್ದಾರೆ