ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್; ಜಿ-ನೆಟ್​​ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಅರೆಸ್ಟ್

ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿ-ನೆಟ್​​ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಕುಮಾರ್​ನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರುಣ್ ಕುಮಾರ್ ಎಂಡಿ ಫಣೀಂದ್ರ, ಸಿಇಒ ವಿನುಕುಮಾರ್ ಕೊಲೆಗೆ ಸುಪಾರಿ ನೀಡಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ಅಮೃತಹಳ್ಳಿ ಪಂಪಾನಗರದಲ್ಲಿ ನಡೆದ ಜೋಡಿ ಕೊಲೆಗೆ ಅರುಣ್ ಕುಮಾರ್ ಸುಪಾರಿ ನೀಡಿದ್ದ ಎಂಬ ಸತ್ಯ ಬಯಲಾಗಿದೆ. ಅಮೃತಹಳ್ಳಿ ಪೊಲೀಸರು ಆರೋಪಿ ಅರುಣ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಜೋಕರ್​​ ಫಿಲೆಕ್ಸ್​ಗೆ ಸುಪಾರಿ ನೀಡಿದ್ದಾಗಿ ಅರುಣ್ ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾನೆ. ಕೊಲೆಯಾದ ಫಣೀಂದ್ರ, ವಿನುಕುಮಾರ್ ಇಬ್ಬರೂ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಫಿಲೆಕ್ಸ್​ ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಫಣೀಂದ್ರ, ವಿನುಕುಮಾರ್ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದರು. ಜಿ-ನೆಟ್​​ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್​​ ಕಂಪನಿ ನಷ್ಟಕ್ಕೆ ಸಿಲುಕಿತ್ತು. ಇದರಿಂದ ಅರುಣ್ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಫಣೀಂದ್ರ ಕೊಲೆಗೆ ಫಿಲೆಕ್ಸ್​​ಗೆ ಸುಪಾರಿ ನೀಡಿದ್ದ ಎಂದು ವಿಷಯ ತಿಳಿದು ಬಂದಿದೆ.

ಕೊಲೆ ಮಾಡಿ ಯಾವ ರೀತಿ ಎಸ್ಕೇಪ್ ಆಗಬೇಕೆಂಬ ಬಗ್ಗೆಯೂ  ಪ್ಲಾನ್ ಮಾಡಿದ್ದ ಹಂತಕರು

ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಮಾಡಿ ಯಾವ ರೀತಿ ಎಸ್ಕೇಪ್ ಆಗ ಬೇಕು ಎಂಬ ಬಗ್ಗೆಯೂ ಹಂತಕರು ಪ್ಲಾನ್ ಮಾಡಿಕೊಂಡಿದ್ದರು. ಬೈಕ್ ನಲ್ಲಿ ಬಂದಿದ್ದ ಹಂತಕರು ಎಸ್ಕೇಪ್ ಆಗಿದ್ದು ಬರಿಗಾಲಲ್ಲಿ. ಕೊಲೆ ನಂತರ ಎಸ್ಕೇಪ್ ಆಗೋದು ಹೇಗೆ ಅನ್ನೊದನ್ನ ಫಿಲೆಕ್ಸ್ ಮೊದಲೆ ಪ್ಲಾನ್ ಮಾಡಿದ್ದ. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದಿದ್ದ ಫಿಲೆಕ್ಸ್, ಎಸ್ಕೇಪ್ ಆಗೋ ರೂಟ್ ಗಳನ್ನ ಪ್ಲಾನ್ ಮಾಡಿದ್ದ.

ಆರೋಪಿಗಳು ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ಎಸ್ಕೇಪ್ ಆಗಿ ನಂತರ ಮುಖ್ಯ ರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದರು. ಕೊಲೆ ನಂತರ ಫಿಲೆಕ್ಸ್ಅಂಡ್ ಟೀಂ ಎಸ್ಕೇಪ್ ಆಗೋ ಎಕ್ಸ್ ಕ್ಲೂಸಿವ್ ಸಿಸಿಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್ ನಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಎಸ್ಕೇಪ್ ಆಗಿದ್ದು ಡ್ರ್ಯಾಗರ್ ಇಟ್ಟುಕೊಳ್ಳಲು ಸಂತೋಷ್ ಸಹಾಯ ಮಾಡಿದ್ದಾನೆ. ಸಾಚಾ ಎಂಬಂತೆ ಆರೋಪಿ ಫಿಲೆಕ್ಸ್ ಜುಬ್ಬ ಧರಿಸಿ ಕೊಲೆ ಮಾಡಲು ಬಂದಿದ್ದ. ಯಾರ ಭಯವೂ ಇಲ್ಲದೇ ರಾಜಾ ರೋಷವಾಗಿ ಆರೋಪಿಗಳು ಎಸ್ಕೇಪ್ ಆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.