ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯ ಮೇಲೆ ಆಕೆಯ ಅಪಾರ್ಟ್ಮೆಂಟ್ ಬಳಿಯೇ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ರವಿ ಸೋಲಂಕಿ ಎಂಬ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ. ಸೋಲಂಕಿ ಜುಲೈ 7 ರಂದು ತನ್ನ ಕಾರಿನಲ್ಲಿ ಯುವತಿ ಮತ್ತು ಆಕೆಯ ಪ್ರಿಯಕರ ಇರುವುದನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ತನ್ನ ಬೈಕ್ನಲ್ಲಿ ಕಾರನ್ನು ಹಿಂಬಾಲಿಸಿದ್ದ ಮತ್ತು ಆಕೆಯ ಗೆಳೆಯ ಪ್ರಶಾಂತ್ ವಿಹಾರ್ನಲ್ಲಿರುವ ತನ್ನ ಅಪಾರ್ಟ್ಮೆಂಟ್ನ ಹೊರಗೆ ಅವಳನ್ನು ಡ್ರಾಪ್ ಮಾಡುತ್ತಿರುವುದನ್ನೇ ಕಾಯುತ್ತಿದ್ದ ವ್ಯಕ್ತಿ ಅಪಾರ್ಟ್ಮೆಂಟ್ ಕಟ್ಟಡದ ಒಳಗೆ ಹೋಗಿದ್ದ, ತಾನು ಪೊಲೀಸ್ ಎಂದು ಹೇಳಿಕೊಂಡಿದ್ದ. ಆಕೆ ಮತ್ತು ಆಕೆಯ ಪ್ರಿಯಕರ ಜತೆಗಿರುವ ವಿಡಯೋ ತೋರಿಸಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಸ್ಥಳದಲ್ಲೇ ಆಕೆಯ ಮೇಲೆ ಹಲ್ಲೆ ನಡೆಸಿ, ಮೆಟ್ಟಿಲುಗಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ತನ್ನ ಬಾಯ್ಫ್ರೆಂಡ್ ಬಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದಾಳೆ ಮತ್ತು ದಂಪತಿಗಳು ಅಪರಾಧವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಎಂದೂ ಆತನನ್ನು ತಾನು ನೋಡಿರಲಿಲ್ಲ ಎಂದು ಆಕೆ ಹೇಳಿದ್ದಾಳೆ. ಮಹಿಳೆಯ ವಿವರಣೆಯ ಆಧಾರದ ಮೇಲೆ ಸ್ಕೆಚ್ ತಯಾರಿಸಲಾಗಿತ್ತು, ಪುರಾವೆಗಳು ಮತ್ತು ಸಿಸಿಟಿವಿ ದೃಶ್ಯಗಳು ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡಿತು.