ಬಡವರಿಗಾಗಿ ಮೋದಿಯವರು ಹತ್ತು ಹಲವು ಯೋಜನೆ ತಂದಿದ್ದಾರೆ – ರೂಪಾಲಿ ನಾಯ್ಕ

ಕಾರವಾರ : ಜಿಲ್ಲಾ ಬಿಜೆಪಿ ವತಿಯಿಂದ ಉತ್ತರ ಕನ್ನಡ “ವರ್ತಕರ ಸಭೆ ” ಯನ್ನು ಇಂದು ಕಾರವಾರದ ಇಂದಿರಾಕಾಂತ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಭೆ ಆರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು, ವಿಶ್ವ ಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ನರೇಂದ್ರ ಮೋದಿಜಿಯವರು ತಮ್ಮ ಒಂಬತ್ತು ವರ್ಷದ ಆಡಳಿತದಲ್ಲಿ ಬಡವರಿಗೋಸ್ಕರ ಹತ್ತು ಹಲವಾರು ಕಾರ್ಯಕ್ರಮಗಳು, ಯೋಜನೆಗಳು ಜಾರಿಗೆ ತಂದ್ದಿದ್ದಾರೆ. ಜಗತ್ತಿಗೆ ಒಬ್ಬ ಮಾದರಿ ಪ್ರಧಾನಿ ಆಗಿದ್ದಾರೆ ಎಂದು ಹೇಳಿದ್ರು. ಅಂತಹ ಜನಪರ ಯೋಜನೆಗಳನ್ನು ಕಾರ್ಯಕರ್ತರಾದ ನಾವು ಮನೆ ಮನೆಗೆ ತಲುಪಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಯವರನ್ನು ಮತ್ತೊಮ್ಮೆ ಗೆಲ್ಲಿಸಿ ಮತ್ತೆ ಪ್ರಧಾನಿಯನ್ನಾಗಿಸಿ ಮಾಡೋದು ಪ್ರತಿಯೊಬ್ಬ ಕಾರ್ಯಕರ್ತನ ಆದ್ಯ ಕರ್ತವ್ಯ ಎಂದು ಕರೆ ನೀಡಿದ್ರು..

 

ವಿಭಾಗ  ಸಹಪ್ರಭಾರಿ ಎನ್.ಎಸ್ ಹೆಗಡೆ, ದೇವಮಾನವ ಮೋದೀಜಿಯಂತಹ ಪ್ರಧಾನಿ ಪಡೆದ ನಾವುಗಳು ಧನ್ಯರು. ಅವರ ಸಾಧನೆಗಳನ್ನು ಮನೆ ಮನೆಗೆ ಪರಿಚಯಿಸೋಣ ಎಂದರು. ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ನರೇಂದ್ರ ಮೋದಿಜಿಯವರ ಸಾಧನೆಗಳನ್ನು ಕೊಂಡಾಡಿದರು. ಇಂದು ಜಿ.ಎಸ್.ಟಿ ಯಿಂದ ದೇಶಕ್ಕೆ ಹಲವಾರು ಕೋಟಿ ರೂಪಾಯಿ ಆದಾಯ ದೊರಕಿದೆ. ಕೃಷಿ, ಕೈಗಾರಿಕೆಗಳಿಗೆ ನಮ್ಮ ಹೆಮ್ಮೆಯ ಪ್ರಧಾನಿ ವಿಶೇಷ ಸ್ಥಾನ ಮಾನ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದ್ರು…

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಬಿಜೆಪಿ ಜಿಲ್ಲಾ ಸಮೀತಿ ಪದಾಧಿಕಾರಿಗಳು, ನಗರ ಹಾಗೂ ಗ್ರಾಮೀಣ ಮಂಡಲದ ಅಧ್ಯಕ್ಷರು, ಕಾರವಾರ ನಗರಸಭಾ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ರು.