ಆಧಾರ್ ನಂಬರ್ಗೆ ಲಿಂಕ್ ಆಗದ PANCARD ಜುಲೈ 1ರಿಂದ ನಿಷ್ಕ್ರಿಯವಾಗಿದೆ. ಹಣಕಾಸು ವಹಿವಾಟಿಗೆ ಪ್ಯಾನ್ ನಂಬರ್ ಬಹಳ ಅಗತ್ಯ. ಹೀಗಾಗಿ, ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದು ಅಗತ್ಯ. ನೀವು ನಿಷ್ಕ್ರಿಯಗೊಂಡ ಪ್ಯಾನ್ನ ಬಳಕೆ ಮುಂದುವರಿಸಿದರೆ ಸರ್ಕಾರದಿಂದ ಕ್ರಮ ಎದುರಿಸಬೇಕಾಗಬಹುದು. ಅಲ್ಲದೇ ಹಲವು ಹಣಕಾಸು ಚಟುವಟಿಕೆ ನಡೆಸಲು ನಿಷ್ಕ್ರಿಯ ಪ್ಯಾನ್ನಿಂದ ಸಾಧ್ಯವಾಗದೇ ಹೋಗಬಹುದು. ನಿಮ್ಮ ದೈನಂದಿನ ಹಣಕಾಸು ಚಟುವಟಿಕೆಗೂ ಕಷ್ಟವಾಗಬಹುದು. ನೀವು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡದೇ ಹೋಗಿದ್ದರೆ 1,000 ರೂ ದಂಡ ಕಟ್ಟಿ ಈಗಲೂ ಮಾಡಬಹುದು. ಅದು ಸಕ್ರಿಯಗೊಳ್ಳಲು 30 ದಿನಗಳಾದರೂ ಬೇಕು. ಅಲ್ಲಿಯವರೆಗೂ ನೀವು ಪ್ಯಾನ್ ಬಳಸುವಂತಿಲ್ಲ. ನಿಷ್ಕ್ರಿಯಗೊಂಡ ಪ್ಯಾನ್ನಿಂದ ಏನೇನು ವಹಿವಾಟು ಸಾಧ್ಯವಾಗುವುದಿಲ್ಲ ಎಂಬ ವಿವರ ಇಲ್ಲಿದೆ…
- ನಿಷ್ಕ್ರಿಯ ಪ್ಯಾನ್ ಬಳಸಿ ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ
- ಜೂನ್ 30ಕ್ಕೆ ಮುನ್ನ ನೀವು ಐಟಿಆರ್ ಸಲ್ಲಿಸಿದ್ದು ನಿಮ್ಮ ಪ್ಯಾನ್ ಈಗ ನಿಷ್ಕ್ರಿಯವಾಗಿದ್ದರೆ ಐಟಿಆರ್ ಅರ್ಜಿ ಪ್ರೋಸಸ್ ಆಗುವುದಿಲ್ಲ. ರೀಫಂಡ್ ಕೂಡ ಆಗುವುದಿಲ್ಲ.
- ನಿಷ್ಕ್ರಿಯ ಪ್ಯಾನ್ ಬಳಸಿ ನೀವು ಹೊಸ ಬ್ಯಾಂಕ್ ಖಾತೆ ಪಡೆಯಲು ಆಗುವುದಿಲ್ಲ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸಿಗುವುದಿಲ್ಲ.
- ಯಾವುದೇ ಬ್ಯಾಂಕ್ನಲ್ಲಿ 50,000 ರೂಗಿಂತ ಹೆಚ್ಚು ನಗದು ಹಣವನ್ನು ಜಮೆ ಮಾಡಲು ಆಗುವುದಿಲ್ಲ.
- ನಿಷ್ಕ್ರಿಯ ಪ್ಯಾನ್ ಬಳಸಿ ಡಿಮ್ಯಾಟ್ ಅಕೌಂಟ್ ತೆರೆಯಲು ಆಗುವುದಿಲ್ಲ. ಮ್ಯೂಚುವಲ್ ಫಂಡ್ನಲ್ಲಿ 50,000 ರೂಗಿಂತ ಹೆಚ್ಚು ಮೊತ್ತದ ಪಾವತಿ ಮಾಡಲು ಆಗುವುದಿಲ್ಲ.
- ಯಾವುದೇ ಕಂಪನಿ ಅಥವಾ ಸಂಸ್ಥೆಗಳ ಡಿಬಂಚರ್ ಅಥವಾ ಬಾಂಡ್ಗಳು 50,000 ರೂಗಿಂತ ಹೆಚ್ಚಿರುವಂತಿಲ್ಲ.
- 1 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಸೆಕ್ಯೂರಿಟಿಗಳ ವಹಿವಾಟು ಸಾಧ್ಯವಿಲ್ಲ. ಲಿಸ್ಟ್ ಆಗಿಲ್ಲ ಕಂಪನಿಯ ಷೇರುಗಳ ವಹಿವಾಟು 1 ಲಕ್ಷ ರೂಗಿಂತ ಹೆಚ್ಚಿರುವಂತಿಲ್ಲ.
- ಹೋಟೆಲ್ ಅಥವಾ ರೆಸ್ಟೋರೆಂಟ್ಗಳಲ್ಲಿ ಒಮ್ಮೆಗೆ 50,000 ರೂಗಿಂತ ಹೆಚ್ಚು ಮೊತ್ತದ ನಗದಿ ಪಾವತಿ ಮಾಡಲು ಆಗುವುದಿಲ್ಲ.
- ವಿದೇಶೀ ಪ್ರಯಾಣಕ್ಕಾಗಿ ಅಥವಾ ವಿದೇಶೀ ಕರೆನ್ಸಿ ಖರೀದಿಗೆ 50,000 ರೂಗಿಂತ ಹೆಚ್ಚು ನಗದು ಪಾವತಿ ಸಾಧ್ಯವಿಲ್ಲ.
- ಪೇಟಿಎಂ, ಫೋನ್ಪೇ ಇತ್ಯಾದಿ ಮೊಬೈಲ್ ವ್ಯಾಲಟ್ಗಳಿಗೆ ಒಂದು ವರ್ಷದಲ್ಲಿ 50,000 ರೂಗಿಂತ ಹೆಚ್ಚು ಪಾವತಿ ಸಾಧ್ಯವಿಲ್ಲ.
- ಆರ್ಬಿಐ ನೀಡುವ ಬಾಂಡ್ಗಳನ್ನು ಖರೀದಿಸಲು ನೀವು ಮಾಡುವ ಪಾವತಿ 50,000 ರೂ ಮೀರಲಾಗುವುದಿಲ್ಲ.
- ಬ್ಯಅಕ್ ಡ್ರಾಫ್ಟ್, ಪೇ ಆರ್ಡರ್, ಬ್ಯಾಂಕರ್ ಚೆಕ್ ಇತ್ಯಾದಿಯನ್ನು ಖರೀದಿಸಲು ಒಂದು ದಿನದಲ್ಲಿ 50,000 ರೂಗಿಂತ ಹೆಚ್ಚು ಹಣ ವ್ಯಯಿಸಲು ಆಗುವುದಿಲ್ಲ.
- ಬ್ಯಾಂಕು, ಅಂಚೆ ಕಚೇರಿ ಇತ್ಯಾದಿ ಕಡೆ 50,000ರೂಗಿಂತ ಹೆಚ್ಚು ಮೊತ್ತದ ಟೈಮ್ ಡೆಪಾಸಿಟ್ ಆರಂಭಿಸಲು ಸಾಧ್ಯವಿಲ್ಲ.
- ಎಲ್ಐಸಿ ಪ್ರೀಮಿಯಮ್ಗಳನ್ನು ವರ್ಷಕ್ಕೆ 50,000 ರೂಗಿಂತ ಹೆಚ್ಚು ಪಾವತಿಸಲು ಆಗುವುದಿಲ್ಲ.