ವೇದವ್ಯಾಸರ ಜನ್ಮದಿನದಂದು ಗುರು ಪೂರ್ಣಿಮಾ ಆಚರಿಸುವುದೇಕೆ? ಗುರು ಯಾರು?

ಈ ದಿನ ಮಹರ್ಷಿ ವೇದವ್ಯಾಸರ ಜನಿಸಿದ್ದಾರೆ. ಅದಕ್ಕಾಗಿಯೇ ಗುರು ಪೂರ್ಣಿಮಾವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಗುರು ಪೂರ್ಣಿಮಾದಂದು ಗುರುವನ್ನು ಆರಾಧಿಸಲಿಚ್ಛಿಸುವ ಶಿಷ್ಯರು ಗುರುವಿನ ಪಾದ ಪೂಜೆ ಮಾಡಿ ಅವರಿಗೆ ಗುರು ದಕ್ಷಿಣೆ ಸಮರ್ಪಿಸಬೇಕು.

ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಗಳ ಸ್ನಾನ, ದಾನ ಮತ್ತು ಧ್ಯಾನ ಮಾಡುವುದರಿಂದ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ವರ್ಷದಲ್ಲಿ 12 ಹುಣ್ಣಿಮೆಗಳು ಬರುತ್ತವೆ ಮತ್ತು ಹುಣ್ಣಿಮೆಯ ದಿನ ಪೂರ್ಣ ಚಂದ್ರೋದಯ ಗೋಚರಿಸುತ್ತದೆ. ಹುಣ್ಣಿಮೆಯ ದಿನದಂದು ಚಂದ್ರದೇವನನ್ನು ಪೂಜಿಸುವುದರಿಂದ ಅಪೇಕ್ಷಿತ ಫಲವನ್ನು ಪಡೆದುಕೊಳ್ಳಬಹುದು.

ಆಷಾಢ ತಿಂಗಳ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ವರ್ಷ ಗುರು ಪೂರ್ಣಿಮೆಯನ್ನು 3 ಜುಲೈ 2023, ಸೋಮವಾರ ಆಚರಿಸಲಾಗುತ್ತದೆ. ಮೊದಲ ಬಾರಿಗೆ ಮಹರ್ಷಿ ವೇದ ವ್ಯಾಸರು ಎಲ್ಲಾ ನಾಲ್ಕು ವೇದಗಳ ಜ್ಞಾನವನ್ನು ಮಾನವಕುಲಕ್ಕೆ ನೀಡಿದರು ಎನ್ನಲಾಗುತ್ತದೆ. ಇದೇ ಕಾರಣದಿಂದ ಅವರನ್ನು ಮೊದಲ ಗುರು ಎಂದೂ ಕೂಡ ಕರೆಯಲಾಗುತ್ತದೆ.

ಈ ದಿನ ಮಹರ್ಷಿ ವೇದವ್ಯಾಸರ ಜನಿಸಿದ್ದಾರೆ. ಅದಕ್ಕಾಗಿಯೇ ಗುರು ಪೂರ್ಣಿಮಾವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಗುರು ಪೂರ್ಣಿಮಾದಂದು ಗುರುವನ್ನು ಆರಾಧಿಸಲಿಚ್ಛಿಸುವ ಶಿಷ್ಯರು ಗುರುವಿನ ಪಾದ ಪೂಜೆ ಮಾಡಿ ಅವರಿಗೆ ಗುರು ದಕ್ಷಿಣೆ ಸಮರ್ಪಿಸಬೇಕು. ವೇದವ್ಯಾಸರ ಜನ್ಮದಿನದ ಸ್ಮರಣಾರ್ಥವಾಗಿ ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಗುರುಗಳನ್ನು ಪೂಜಿಸುವ ಸಂಪ್ರದಾಯವು ಶತಮಾನಗಳಿಂದ ನಡೆಯುತ್ತಿದೆ. ಗುರು ಪೂರ್ಣಿಮಾವನ್ನು ದೇಶಾದ್ಯಂತ ಸಂತೋಷ ಮತ್ತು ಚೈತನ್ಯದಿಂದ ಆಚರಿಸಲಾಗುತ್ತದೆ. ಈ ದಿನವು ಕೇವಲ ಮೂರು ಧರ್ಮಗಳಿಗೆ (ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮ) ಮಾತ್ರ ಸೀಮಿತವಾಗಿಲ್ಲ. ಇತರ ಧರ್ಮದ ಜನರು ಈ ಹಬ್ಬದ ಆಚರಣೆಯನ್ನು ನಡೆಸುತ್ತಾರೆ. ಪ್ರತಿಯೊಂದು ಧರ್ಮದಲ್ಲೂ ವಿಭಿನ್ನತೆ ಇರುವುದನ್ನು ಕಾಣಬಹುದು.

ಗುರು ಯಾರು?

ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು, ಎಂಬುದಕ್ಕೆ ಬೆಳಕು ಎಂದು ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ತರುವವನೇ ಗುರು. ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯ ಸಮಯದಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಕರೆದೊಯ್ದು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ತಮ್ಮ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ಇದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ಆ ಗುರುಗಳ ಆಶ್ರಮದಲ್ಲಿದ್ದುಕೊಂಡು ಗುರುಗಳ ಸೇವೆ ಮಾಡಿ ಅವರ ಮನೆಯ ಎಲ್ಲ ಕೆಲಸಗಳನ್ನು ಭಕ್ತಿಯಿಂದ ಶ್ರದ್ದೆಯಿಂದ ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತರಾಗಿ ಮಾಡಿ ಗುರುಕೃಪೆಗೆ ಪಾತ್ರರಾಗುತ್ತಿದ್ದರು. ತನ್ನನ್ನು ಮೆಚ್ಚಿಸುವ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಹಿಂದಿನ ಗುರು ಶಿಷ್ಯ ಸಂಬಂಧ ಈಗ ಉಳಿದಿಲ್ಲ.

ಗುರು ಪೂರ್ಣಿಮಾ ದಿನದ ಮಹತ್ವ

ಹುಟ್ಟಿನಿಂದಲೇ ಯಾರೂ ಪಂಡಿತರಲ್ಲ. ಎಲ್ಲರಿಗೂ ಜ್ಞಾನದ ಅವಶ್ಯಕತೆ. ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆ, ಸಿಗುವ ಪಾಠ, ಕಲಿಸುವ ಎಲ್ಲರೂ ಗುರುಗಳೇ. ಜೀವನವನ್ನು ಸಾರ್ಥಕಗೊಳಿಸಿದ ಗುರುವನ್ನು ಈ ದಿನ ಸ್ಮರಿಸಬೇಕು. ನಮ್ಮ ವೇದಗಳು ಆಚಾರ್ಯ ದೇವೋಭವ ಎಂದು ಗುರುಗಳನ್ನು ಮನಸಾ ಗೌರವಿಸಿದ್ದಲ್ಲದೆ ಅವರಿಗೆ ತಂದೆ ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ.