ಉತ್ತರ ಕನ್ನಡ ಜಿಲ್ಲೆಯ ಟೋಲ್‌ ಗೇಟ್‌ ಹಾಗೂ ಟನಲ್‌ ಬಂದ್‌ – ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿಯಿಂದ ಕರಾವಳಿಯ ಐದು ತಾಲೂಕಿನಲ್ಲೂ ಕೃತಕ ಪ್ರವಾಹ ಸೃಷ್ಟಿಯಾಗಿ ಹಲವು ಮನೆಗಳು ಜಲಾವೃತವಾಗಿತ್ತು. ಇನ್ನು ಹೆದ್ದಾರಿಯ ಅಸಮರ್ಪಕ ನಿರ್ವಹಣೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಹಾಗೂ ನಿರಂತರ ಗುಡ್ಡ ಕುಸಿತದಿಂದ ಸಾವು ನೋವುಗಳು ಸಂಭವಿಸುತ್ತಿವೆ..

ಈ ಕುರಿತು ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಸಭೆ ಕರೆದಿದ್ರು. ಈ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯ ಅಧಿಕಾರಿಗಳನ್ನು ತರಾಟೆ ತಗೆದುಕೊಂಡ್ರು…

ಈ ಮಧ್ಯೆ ಮಾಧ್ಯಮದ ವರದಿಯನ್ನು ಪ್ರಸ್ತಾಪಿಸಿದ ಸಚಿವರು ಕಾರವಾರದ ಟನಲ್‌ನ ಫಿಟ್ನೆಸ್‌ ಸರ್ಟೀಫಿಕೆಟ್‌ ಅನ್ನು ಕೇಳಿದಾಗ ಐಆರ್‌ಬಿ ಅಧಿಕಾರಿ ಹರಿಕೃಷ್ಣ ಫಿಟ್ನೆಸ್‌ ಸರ್ಟಿಫಿಕೆಟ್‌ ಇಲ್ಲದಿರುವ ಬಗ್ಗೆ ತಿಳಿಸಿದ್ರು. ಇನ್ನು ಹೆದ್ದಾರಿ ಕಾಮಗಾರಿಯಲ್ಲೂ ಲೋಪವಾಗಿರುವ ಕುರಿತು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾರವಾರದ ಟನಲ್‌ನ ಧೃಡತೆ ಪ್ರಮಾಣ ಪತ್ರ ನೀಡುವವರೆಗೂ ಟನಲ್‌ ಬಂದ್ ಮಾಡಲು ಒಪ್ಪಿಕೊಂಡಿದ್ದಾರೆ..

ಇದಲ್ಲದೇ ಹೆದ್ದಾರಿ ಉದ್ದಕ್ಕೂ ಕಳಪೆ ಕಾಮಗಾರಿ ಮಾಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂರು ಟೋಲ್‌ ಗೇಟ್‌ ಹಾಗೂ ಟನಲ್‌ ಬಂದ್‌ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಸೂಚನೆ ನೀಡಿದ್ದಾರೆ. ಹೀಗಾಗಿ ಕಾರವಾರದ ಬೈತಕೊಲ ಮಾರ್ಗದಲ್ಲಿರುವ ಎರಡು ಸುರಂಗ ಮಾರ್ಗದ ಧೃಡತೆ ಪ್ರಮಾಣ ಪತ್ರ ನೀಡುವವರೆಗೂ ನಾಳೆಯಿಂದ ಎರಡು ಟನಲ್‌ ಬಂದ್‌ ಇರಲಿದೆ. ಒಂದು ವೇಳೆ ಫಿಟ್ನೆಸ್‌ ಸರ್ಟಿಫಿಕೆಟ್‌ ನೀಡಿದ್ದಲ್ಲಿ ಟೋಲ್‌ಗೇಟ್‌ ಶುಲ್ಕ ಸಂಗ್ರಹಿಸಬಹುದು ಎಂದು ಸಚಿವರು ತಿಳಿಸಿದ್ದಾರೆ….