ಇಬ್ಬರು ಅಪರಿಚಿತ ವ್ಯಕ್ತಿಗಳ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಇಬ್ಬರು ಅಪರಿಚಿತ ವ್ಯಕ್ತಿಗಳ ನಡುವೆ ಗಲಾಟೆ ನಡೆದು, Murder ಯಲ್ಲಿ ಅಂತ್ಯವಾದ ಘಟನೆ ಮಲ್ಲೇಶ್ವರಂನ ಲಿಂಕ್ ರೋಡ್ ಸಿಗ್ನಲ್ ಬಳಿ ನಡೆದಿದೆ. ಇನ್ನು ಈ ಇಬ್ಬರು ರಸ್ತೆ ಬದಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ನಿನ್ನೆ(ಜು.8) ಸಂಜೆ ಏಳು ವರೆ ಸುಮಾರಿಗೆ ಇಬ್ಬರು ಕುಡಿದು ಗಲಾಟೆ ಮಾಡಿಕೊಂಡು ಹೊಡೆದಾಡಿದ್ದಾರೆ. ಈ ವೇಳೆ ಓರ್ವನಿಗೆ ದೊಣ್ಣೆಯಿಂದ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.