ಸಿದ್ದಾಪುರ ಬಿಇಓ ಆಗಿ ಜಿ.ಐ.ನಾಯ್ಕ ನೇಮಕ


ಸಿದ್ದಾಪುರ: ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಯನ್ನಾಗಿ ಜಿ.ಐ.ನಾಯ್ಕ ಗೋಳಗೋಡ ಇವರನ್ನು ನಿಯೋಜಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಿದ್ದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸದಾನಂದ ಸ್ವಾಮಿ ಅವರ ಸ್ಥಾನಕ್ಕೆ ಜಿ.ಐ.ನಾಯ್ಕ ಇವರನ್ನು ನಿಯೋಜಿಸಲಾಗಿದೆ. ತಾಲೂಕಿನ ಗೋಳಗೋಡಿನವರಾದ ಇವರು ಸಹಾಯಕ ಶಿಕ್ಷಕರಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ವೃತ್ತ ಆರಂಭಿಸಿ ಸಿದ್ದಾಪುರದ ಲಂಬಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾಗಿ ನಂತರ ತಾಲೂಕಾ ಪಂಚಾಯ್ತಿಯ ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ತದನಂತರ ಸಿದ್ದಾಪುರ ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಐ.ನಾಯ್ಕ ಪ್ರಸ್ತುತ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆಯಲ್ಲಿದ್ದ ಇವರನ್ನು ಸಿದ್ದಾಪುರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾಯಿಸಿ ಸರ್ಕಾರ ಶನಿವಾರ ಆದೇಶ ಹೊರಡಿಸಿದ್ದು, ಸೋಮವಾರ ನೂತನ ಬಿಇಓ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸರಳ, ಸೌಮ್ಯ ಸ್ವಭಾವದ ಮಿತಭಾಷಿಯಾಗಿರುವ ಜಿ.ಐ.ನಾಯ್ಕ ಅಧಿಕಾರಾವಧಿಯಲ್ಲಿ ತಾಲೂಕಿನ ಶೈಕ್ಷಣಿಕ ಕ್ಷೇತ್ರ ಉತ್ತುಂಗಕ್ಕೇರಲಿ ಎಂದು ಹಿತೈಷಿಗಳು ಶುಭ ಹಾರೈಸಿದ್ದಾರೆ.