ಮೈಸೂರು ಅಭಿವೃದ್ದಿಗೆ ಆದ್ಯತೆಯೇ ಕೊಟ್ಟಿಲ್ಲ -ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಸಮಾಧಾನ

ಮೈಸೂರು: ಸಿಎಂ ತವರು ಜಿಲ್ಲೆ ಮೈಸೂರಿಗೆ ಬಜೆಟ್​ನಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ ನಿರೀಕ್ಷೆಯಂತೆ ಬಜೆಟ್​ನಲ್ಲಿ(Karnataka Budget 2023) ಹೆಚ್ಚಿನ ಆಧ್ಯತೆ ಸಿಕ್ಕಿಲ್ಲ ಎಂಬ ಅಸಮಾಧಾನದ ಕೂಗು ಕೇಳಿ ಬಂದಿದೆ. ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ ವಹಿಸಿದ್ದು, ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಸೇರಿದಂತೆ ಸಿಎಂ ಸಿದ್ದರಾಮಯ್ಯನವರು ಕೆಲವೊಂದು ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಬಹುದಿನಗಳಿಂದ ಇದ್ದ ಕೆಲವು ಪ್ರಸ್ತಾವನೆಗೆ ಈ ಬಾರಿಯೂ ಬಜೆಟ್ ನಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಇದು ಮೈಸೂರು ಜನರಿಗೆ ಕೊಂಚ ಬೇಸರ ತಂದಿದೆ.

ರಾಜ್ಯ ಬಜೆಟ್ ಮೈಸೂರು ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ ಗೌಡ ಅಸಮಾಧಾನ ಹೊರ ಹಾಕಿದ್ದಾರೆ. 2023-24 ಬಜೆಟ್‌ನಲ್ಲಿ ಯಾವುದೇ ಹೊಸ ತೆರಿಗೆಗಳು ಇಲ್ಲ. ಜನಸಾಮಾನ್ಯನಿಗೆ ಸೇರಿದಂತೆ ಯಾರಿಗೂ ಹೊರೆಯಾಗದ ನೂತನ ಬಜೆಟ್ ಸ್ವಾಗತಾರ್ಹ. ಆದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಏನೂ ಅನುದಾನ ನೀಡದೆ ಕಡೆಗಣಿಸಿದ್ದಾರೆ ಎಂದು ನಾರಾಯಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

  1. ಚಾಮುಂಡಿ ಬೆಟ್ಟ ಆಭಿವೃದ್ದಿ ಪ್ರಾಧಿಕಾರ ಅಂತ ಘೋಷಣೆ ಮಾಡಲಾಗಿದೆ ಹಣ ಮೀಸಲಿಟ್ಟಿಲ್ಲ.
  2. ಚಿತ್ರನಗರಿ ಇಮ್ಮಾವು ನಲ್ಲೇ ಮಾಡಲಾಗುವುದೆಂದು ಹೇಳಲಾಗಿದೆ ಹಣ ನೀಡಿಲ್ಲ
  3. ದಸರಾ ವಸ್ತು ಪ್ರದರ್ಶನವನ್ನು ಮೇಲ್ದರ್ಜೆಗೆ ಏರಿಸಲಾವುದೆಂದು ಹೇಳಲಾಗಿದೆ ಹಣ ನೀಡಿಲ್ಲ
  4. ಏರ್ ಪೋರ್ಟ್ ರನ್ ವೇ ವಿಸ್ತರಿಸಲಾಗುವುದೆಂದು ಹೇಳಿ ಹಣ ಮೀಸಲಿಟ್ಟಿಲ್ಲ
  5. ದಸರಾ ಅಭಿವೃದ್ದಿ ಪ್ರಾಧಿಕಾರ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ
  6. ಜಿಲ್ಲೆಗಳನ್ನೊಳಗೊಂಡ ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಕೋರಲಾಗಿತ್ತು ಅದರ ಪ್ರಸ್ತಾಪವೇ ಇಲ್ಲ
  7. ಜೂ ಹಿಂಭಾಗ ಅರ್ಧ ನಿರ್ಮಿಸಿ ನೆನಗುದಿಗೆ ಬಿದ್ದಿರುವ ಅಂತರರಾಷ್ಟ್ರೀಯ ಮಟ್ಟದ ಅಕ್ವೇರಿಯಮ್ ಬಗ್ಗೆ ಮಾಹಿತಿಯೇ ಇಲ್ಲ
  8. ಹೋಟೆಲ್ ಉದ್ಯಮಕ್ಕೂ ಯಾವುದೇ ಪ್ರೊತ್ಸಾಹದ ಪ್ರಸ್ತಾಪವೇ ಇಲ್ಲಒಟ್ಟಾರೆ ಅಭಿವೃದ್ದಿಗೆ ಆದ್ಯತೆ ಇಲ್ಲವೇ ಇಲ್ಲಂತಾಗಿದೆ. ಯಥಾಸ್ಥಿತಿ ಆಯವ್ಯಯ ಕಾಪಾಡಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ಬೇಸರ ಹೊರ ಹಾಕಿದ್ದಾರೆ.