ಕಾರವಾರ: ಕೆಲಸಕ್ಕೆಂದು ಮನೆಯಿಂದ ಹೊರ ಹೋದ ವ್ಯಕ್ತಿಯೋರ್ವ ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಆತನ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮನೋಜ ಕೃಷ್ಣಾನಂದ ಪೆಡ್ನೇಕರ (33) ಎಂಬಾತನೇ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು ತಾಲೂಕಿನ ಅಮದಳ್ಳಿ, ಜಡಿಗದ್ದಾದಲ್ಲಿ ವಾಸವಿದ್ದ. ಜು.18 ರಂದು ಅಮದಳ್ಳಿಯಲ್ಲಿರುವ ಬಾಡಿಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ಮನೆಗೆ ಮರಳಿ ಬಂದಿಲ್ಲ. ಜು.20 ರಂದು ಹೆಂಡತಿಗೆ ಕರೆ ಮಾಡಿ ತಾನು ಮುಂದಿನ ವಾರದಿಂದ ಕೆಲಸಕ್ಕೆ ಹೋಗುತ್ತೇನೆ. ಈಗ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ.
ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅವರ ಬಗ್ಗೆ ಹುಡುಕಾಟ ನಡೆಸಿ ಎಲ್ಲಿಯೂ ಸುಳಿವು ಸಿಗದೇ ಆತನ ಪತ್ನಿ ರೇಷ್ಮಾ ಮನೋಜ ಪೆಡ್ನೇಕರ ಕಾರವಾರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯು ಗೋದಿ ಮೈ ಬಣ್ಣ, ದುಂಡು ಮುಖ, ಸಧೃಡ ಮೈ ಕಟ್ಟು, ಕಪ್ಪು ತಲೆ ಕೂದಲು, ಮೀಸೆ ದಾಡಿ ಬಿಟ್ಟಿದ್ದು 5.9 ಅಡಿ ಎತ್ತರ, ಮನೆಯಿಂದ ಹೊರ ಹೋಗುವಾಗ ಬೂದು ಬಣ್ಣದ ಲೈನಿಂಗ್ ಟಿ ಶರ್ಟ, ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದು ಕನ್ನಡ, ಕೊಂಕಣಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಈ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದಲ್ಲಿ ಕಾರವಾರ ಗ್ರಾಮೀಣ ಪೊಲೀಸ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.