ತುಮಕೂರು: ಮಸೀದಿ ಬಳಿ ಇರುವ ಕರಗಲಮ್ಮ ದೇಗುಲದ ಮೂರ್ತಿಗೆ ಪೂಜೆ ಮಾಡಲು ಮುಸ್ಲಿಮರು ವಿರೋಧ ವ್ಯಕ್ತಪಡಿಸಿರುವ ಘಟನೆ ತುಮಕೂರು ಬಳಿಯ ಕೆಸರುಮಡು ಗ್ರಾಮದಲ್ಲಿ ನಡೆದಿದೆ. ಮಸೀದಿ ಪಕ್ಕದಲ್ಲಿರುವ ಕರಗಲಮ್ಮಗೆ ಯಾವುದೆ ಕಾರಣಕ್ಕೂ ಪೂಜೆ ಮಾಡದಂತೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ. ಇದರಿಂದ ಆಕ್ರೊಶಗೊಂಡ ಗ್ರಾಮಸ್ಥರು ಪದ್ದತಿಯಂತೆ ಮುಂದುವರಿಕೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಂದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದೇವತೆ ಮಾರಮ್ಮ ಜಾತ್ರೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಇದಕ್ಕೂ ಮುನ್ನ ಉಪ್ಪಾರ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ. ಪೂಜೆ ಮಾಡಿ ಮೊಸರನ್ನ ಹೆಡೆ ಇಡಬೇಕಿತ್ತು. ಆದರೆ ಇದಕ್ಕೆ ಮಸೀದಿ ಪಕ್ಕ ಇರುವ ಕಾರಣ ಮುಸ್ಲಿಂ ಸಮುದಾಯ ವಿರೋದ ವ್ಯಕ್ತಪಡಿಸಿದೆ. ಇದರಿಂದ ಗ್ರಾಮಸ್ಥರು ತೀವ್ರ ಆಕ್ರೊಶಗೊಂಡಿದ್ದು, ಪದ್ದತಿಯಂತೆ ಪೂಜೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.