ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಡಪದ ಅಣ್ಣಪ್ಪ ಜಯಂತಿ ಆಚರಣೆ

ಜೋಯಿಡಾ : ತಹಶೀಲ್ದಾರ್ ಕಾರ್ಯಾಲಯದಲ್ಲಿ ವೈಚಾರಿಕ ಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ತಹಶೀಲ್ದಾರ್ ಬಸವರಾಜ.ಟಿ ಅವರು ಹಡಪದ‌ ಅಣ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಿ ಮಾತನಾಡುತ್ತಾ ಹಡಪದ ಅಣ್ಣಪ್ಪ ಅವರು ತಮ್ಮ ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ- ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತು ಕಾರ್ಯ ನಿರ್ವಾಹಣಾಧಿಕಾರಿ ಆನಂದ ಬಡಕುಂದ್ರಿ ಮತ್ತು ಉಪ ತಹಶೀಲ್ದಾರಗಳಾದ ಸಂಜೀವ್ ಭಜಂತ್ರಿ, ಸುರೇಶ್ ಒಕ್ಕುಂದ ಹಾಗೂ ತಹಶೀಲ್ದಾರ್ ಕಚೇರಿಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.