ಭಟ್ಕಳ ತಾಲೂಕಿನ ನೂತನ ಸಹಾಯಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಡಾ. ನಯನ ಎನ್.

ಭಟ್ಕಳ : ತಾಲೂಕಿನ ನೂತನ ಸಹಾಯಕ ಆಯುಕ್ತರಾಗಿ ಡಾ. ನಯನ ಎನ್. ಇಂದು ತಾಲೂಕಾ ಆಡಳಿತ ಸೌಧದಲ್ಲಿ ಅಧಿಕಾರ ಸ್ವೀಕರಿಸಿಕೊಂಡರು.

ಇವರು ಈ ಮೊದಲು ವಿಜ್ಞಾನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಬಳ್ಳಾರಿ ಇದರ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 2021 ಮಾರ್ಚ್ 22 ರಿಂದ ಮಮತಾ ದೇವಿ ಜಿ.ಎಸ್ ಅವರು ಭಟ್ಕಳ ಸಹಾಯಕ ಆಯುಕ್ತರಾಗಿ  ಸೇವೆ ಸಲ್ಲಿಸುತ್ತಿದ್ದರು. ಈಗ ಈ ಸ್ಥಾನಕ್ಕೆ ಡಾ. ನಯನ ಎನ್ ನೇಮಕಗೊಂಡಿದ್ದು ಈ ಹಿಂದಿನ ಸಹಾಯಕ ಆಯುಕ್ತರಾದ ಮಮತಾ ದೇವಿ ಜಿ.ಎಸ್ ನೂತನ ಸಹಾಯಕ ಆಯುಕ್ತರಾದ ಡಾ.ನಯನ ಎನ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.