ಹೈದರಾಬಾದ್: ಚರ್ಮ ಹಾಗೂ ಕೂದಲಿಗೆ ಚಿಕಿತ್ಸೆ ನೀಡೋ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿಯೊಬ್ಬಳು ಗ್ರಾಹಕರೊಬ್ಬರ 30 ಲಕ್ಷ ರೂ. ಮೌಲ್ಯದ ವಜ್ರದ ಉಂಗುರವನ್ನು ಕದ್ದು, ಬಳಿಕ ಸಿಕ್ಕಿಬೀಳೋ ಭಯದಲ್ಲಿ ಅದನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿರೋ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ದೂರಾದ ಮಹಿಳೆ ಚಿಕಿತ್ಸೆಗೆಂದು ನಗರದ ಜುಬಿಲಿ ಹಿಲ್ಸ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಚಿಕಿತ್ಸೆ ವೇಳೆ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿ ಅವರಿಗೆ ಉಂಗುರವನ್ನು ಕಳಚಿ ಪೆಟ್ಟಿಗೆಯಲ್ಲಿ ಇಡುವಂತೆ ಹೇಳಿದ್ದಳು. ಚಿಕಿತ್ಸೆಯ ಬಳಿಕ ಮಹಿಳೆ ಮನೆ ತಲುಪಿದ್ದು, ನಂತರ ಅವರಿಗೆ ತನ್ನ ಉಂಗುರವನ್ನು ಕ್ಲಿನಿಕ್‌ನಲ್ಲಿ ಮರೆತಿರುವುದು ಅರಿವಾಗಿದೆ.
ಬಳಿಕ ಮಹಿಳೆ ಸಿಬ್ಬಂದಿಯನ್ನು ವಿಚಾರಿಸಿದ್ದಾಳೆ. ಆದರೆ ತನ್ನ ಉಂಗುರದ ಬಗ್ಗೆ ಏನೂ ಮಾಹಿತಿ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆಕೆ ಉಂಗುರವನ್ನು ಕದ್ದು, ತನ್ನ ಪರ್ಸ್‌ನಲ್ಲಿ ಇಟ್ಟಿರುವುದಾಗಿ ಬಾಯಿಬಿಟ್ಟಿದ್ದಾಳೆ. ಇಷ್ಟಾದ ಬಳಿಕವೂ ಸಿಬ್ಬಂದಿ ಸಿಕ್ಕಿ ಬೀಳುವ ಭಯದಲ್ಲಿ ಉಂಗುರವನ್ನು ಟಾಯ್ಲೆಟ್‌ಗೆ ಎಸೆದು ಫ್ಲಶ್ ಮಾಡಿದ್ದಾಳೆ.
ವಿಚಾರ ತಿಳಿದ ಪೊಲೀಸರು ಪ್ಲಂಬರ್ ಸಹಾಯದಿಂದ ಕಮೋಡ್ ಅನ್ನು ಸಂಪರ್ಕಿಸುವ ಪೈಪ್‌ನಿಂದ ಉಂಗುರವನ್ನು ತೆಗೆದು ಅದನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಕಳ್ಳತನ ನಡೆಸಿದ್ದಕ್ಕಾಗಿ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.