ಆನ್‍ಲೈನ್ ಶಾಪಿಂಗ್‍ನಲ್ಲಿ ಬೆಂಗಳೂರಿಗರೇ ಮುಂದು – ಸರಾಸರಿ ಖರೀದಿಯಲ್ಲಿ ಮುಂಬೈ ಫಸ್ಟ್

ನವದೆಹಲಿ: ಅಮೆಜಾನ್, ಪ್ಲಿಪ್‍ಕಾರ್ಟ್, ಮೀಶೋನಂತಹ ಇತರ ಶಾಪಿಂಗ್ ಸೈಟ್‍ಗಳಲ್ಲಿ ಬೆಂಗಳೂರಿನ ಜನರೇ ಅತಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಸೈಬರ್ ಮೀಡಿಯಾ ರಿಸರ್ಚ್‍ನ ಅಧ್ಯಯನದ ವರದಿ ಹೇಳಿದೆ. ಬೆಂಗಳೂರಿನ ಜನರು ಆನ್‍ಲೈನ್ ಪ್ಲಾಟ್‍ಫಾರಂಗಳಲ್ಲಿ ವಾರಕ್ಕೆ ಸರಾಸರಿ ನಾಲ್ಕು ಗಂಟೆಗಳ ಸಮಯ ವ್ಯಯ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಬೆಂಗಳೂರಿನ ಬಳಿಕ ಗುವಾಹಟಿ, ಕೊಯಮತ್ತೂರು, ಲಕ್ನೋದ ಜನರು ಆನ್‍ಲೈನ್ ಶಾಪಿಂಗ್ ಗೀಳಿಗೆ ಬಿದ್ದಿದ್ದಾರೆ. ಅಲ್ಲಿನ ಜನ ವಾರಕ್ಕೆ ಸುಮಾರು 2 ಗಂಟೆ 25 ನಿಮಿಷಗಳ ಕಾಲವನ್ನು ಈ ಉದ್ದೇಶಕ್ಕಾಗಿ ಕಳೆದಿದ್ದಾರೆ. ವಿಶೇಷವಾಗಿ ಮಹಿಳೆಯರು ಇ-ಕಾಮರ್ಸ್‍ನಲ್ಲಿ ವರ್ಷಕ್ಕೆ ಸುಮಾರು 149 ಗಂಟೆಗಳನ್ನು ಕಳೆಯುತ್ತಿದ್ದಾರೆ ಎಂದು ವರದಿ ಹೇಳಿದೆ.