ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಕೊಂಡಿರುವ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯಾವುದೋ ನಿರ್ಜನ ಪ್ರದೇಶದಲ್ಲಿ ಅಗ್ನಿ ನಿರ್ಮಿಸಿ ಆಕೆ ಬೇಡ ಎಂದು ಅಂಗಲಾಚುತ್ತಿದ್ದರೂ ಆಕೆಯನ್ನು ಹೊತ್ತುಕೊಂಡೇ ಅಗ್ನಿಯನ್ನು ಸುತ್ತಿ ಮದುವೆ ಯಾಗಿದ್ದಾನೆ. ಆಕೆ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಯುವತಿಯನ್ನು ಅಪಹರಿಸಿರುವ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಏಳು ದಿನಗಳು ಕಳೆದಿವೆ. ಮಗಳಿಗೆ ನ್ಯಾಯ ಸಿಗದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಂದೆ ನುಡಿದಿದ್ದಾರೆ.
ಬಾಲಕಿಯ ಸಂಬಂಧಿಕರು ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಟೀನಾ ದಾಬಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಗ್ವಾನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಯಾರನ್ನೂ ಬಂಧಿಸದ ಕಾರಣ ಆರೋಪಿಗಳಿಗೆ ಧೈರ್ಯ ಹೆಚ್ಚಿದೆ, ಅವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ.
ಈ ವೇಳೆ ಯುವತಿಯನ್ನು ಮತ್ತೆ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಕೆಗೆ ಬೇರೆ ಮದುವೆಯನ್ನೂ ಮಾಡುವಂತಿಲ್ಲ ಎಂದು ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.