ಅಂಕೋಲಾ: ಪುರಾತತ್ತ್ವಜ್ಞ ಎಸ್.ಆರ್. ರಾವ್ ಜನ್ಮ ಶತಮಾನೋತ್ಸವ ಆಚರಣೆ; ಉಪನ್ಯಾಸ ಕಾರ್ಯಕ್ರಮ

ಅಂಕೋಲಾ : ಭಾರತದ ಖ್ಯಾತ ಪುರಾತತ್ತ್ವಜ್ಞರಾದ
ಡಾ. ಎಸ್.ಆರ್. ರಾವ್ ಅವರ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮವನ್ನು ನಾಳೆ ಜುಲೈ 1 ರಂದು ಪೂರ್ವಾಹ್ನ 11 ಗಂಟೆಗೆ ಅಂಕೋಲೆಯ ಜಿ.ಸಿ. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಕಾರವಾರ, ಕರ್ನಾಟಕ ಇತಿಹಾಸ ಅಕಾದೆಮಿ ಬೆಂಗಳೂರು, ಗೋಖಲೆ ಸೆಂಟಿನರಿ ಕಾಲೇಜು ಅಂಕೋಲಾ ಹಾಗೂ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಇನಿಶಿಯೇಟಿವ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಸಿ. ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ವಿ. ವಸ್ತ್ರದ್ ಅವರು ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರಾಮಚಂದ್ರ ಎ.ಡಿ. ಹಾಗೂ ಜಿ.ಸಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಎಮ್.ಎಮ್. ಪಾಟೀಲ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಇತಿಹಾಸ ಸಂಶೋಧಕರಾದ ಶ್ರೀ ಶ್ಯಾಮಸುಂದರ ಗೌಡ ಅಂಕೋಲಾರವರು ಡಾ. ಎಸ್.ಆರ್. ರಾವ್ ಅವರ ಜೀವನ ಸಾಧನೆಗಳ ಕುರಿತಾಗಿ ಉಪನ್ಯಾಸ ನೀಡಲಿರುವರು ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.