ಕಾಲು ತೊಡೆಯಲ್ಲಿ 6 ಇಂಚು ಮೂಳೆ ಇಲ್ಲ; ಸೂರಜ್ ಅಪಘಾತ ನೆನೆದು ಕಣ್ಣೀರಿಟ್ಟ ಅಕ್ಕ

ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಮಿಂಚಬೇಕು ಎಂದು ಆಸೆ ಕಂಡ ನಟ ಸೂರಜ್ ಕುಮಾರ್ ಉರ್ಫ್ ಧ್ರುವನ್ ನಂಜನಗೂಡು ಮುಖ್ಯ ರಸ್ತೆಯಲ್ಲಿ ಅಪಘಾತವಾಗಿ ಕಾಲು ಕಳೆದುಕೊಂಡಿದ್ದಾರೆ. ಸೂರಜ್ ಬೈಕ್ ಚಲಾಯಿಸುವಾಗ ಎದುರು ಟಿಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಕಾಲುಗಳ ಮೇಲೆ ಲಾರಿ ಹರಿದ ಕಾರಣ ಸೂರಜ್ ಕಾಲು ಕಳೆದುಕೊಂಡಿದ್ದಾರೆ. ವೆಂಟಿಲೇಟರ್‌ ಬಳಕೆಯಿಂದ ಹೊರ ಬಂದಿರುವ ಸೂರಜ್‌ ಆರೋಗ್ಯ ಈಗ ಹೇಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

‘ಅಪಘಾತ ನಡೆದ ಸ್ಥಳದಿಂದ ಸೂರಜ್‌ ಆಸ್ಪತ್ರೆಗೆ ಬರುವಾಗ ಯಾವ ರೀತಿ ಚಿಕಿತ್ಸೆ ಸಿಕ್ಕಿರಲಿಲ್ಲ ಹೀಗಾಗಿ ತುಂಬಾ ರಕ್ತ ಕಳೆದುಕೊಂಡಿದ್ದರು. ಎಮರ್ಜೆನ್ಸಿಯಲ್ಲಿ ಬಂದ ವ್ಯಕ್ತಿಗಳನ್ನು ನಾವು ಕ್ರಾಶ್‌ ಎಂದು ಕರೆಯುತ್ತೇವೆ ಆದರೆ ಸೂರಜ್ ಅವರನ್ನು ಮೊದಲು ಆಪರೇಷನ್‌ ಥಿಯೇಟರ್‌ಗೆ ಕರೆದುಕೊಂಡು ಹೋಗಬೇಕಿತ್ತು ಕಾರಣ ಮೊದಲು ಅವರ ಪ್ರಾಣ ಉಳಿಸುವುದಷ್ಟೇ ಮುಖ್ಯವಾಗಿತ್ತು.ಆಪರೇಷನ್ ಮಾಡುವ ಮುನ್ನ ಓಪನ್ ಮಾಡಿ ನೋಡಿದಾಗ ಕಾಲಿನಲ್ಲಿ 6 ಇಂಚು ಮೂಳೆ ಇರಲಿಲ್ಲ ತೊಡೆ ಭಾಗದಲ್ಲಿ 6 ಇಂಚು ಮೂಳೆ ಇರಲಿಲ್ಲ. ತಕ್ಷಣವೇ ಸೂರಜ್ ಫ್ಯಾಮಿಲಿ ಜೊತೆ ಮಾತನಾಡಿದ ಆದಷ್ಟು ಬೇಗ ಆಪರೇಷನ್ ಮಾಡಿ ಪ್ರಾಣ ಉಳಿಸಲು ಸಾಧ್ಯವಾಗಿತ್ತು.ಸೂರಜ್ ಬಂದ ತಕ್ಷಣ ವೆಂಟಿಲೇಟರ್ ಹಾಕಿದೆವು..ನಮ್ಮ ಪ್ರಕಾರ ಮೂರು ದಿನ ವೆಂಟಿಲೇಟರ್ ಬೇಕಾಗಬಹುದು ಅಂದುಕೊಂಡೆವು ಆದರೆ ಮರು ದಿನವೇ ಸೂರಜ್ ನಾರ್ಮಲ್ ಆದ ಕಾರಣ ವೆಂಟಿಲೆಟರ್ ತೆಗೆಯಲಾಗಿತ್ತು. ಈಗಲ್ಲೂ ಸೂರಜ್ ದೇಹದಲ್ಲಿ ರಕ್ತ ಕಡಿಮೆ ಇದೆ ಸುಮಾರು 10 ಪೈನ್ಸ್ ಆಫ್ ರಕ್ತ ಬಳಸಿದ್ದೀವಿ ತುಂಬಾ ಪ್ಯಾಕೆಟ್‌ ಫ್ಲೂಯಿಡ್ ಮತ್ತು ಪಿಆರ್‌ಪಿ ಬಳಸಿದ್ದೀವಿ. ಪರಿಸ್ಥಿತಿ ಹೇಗೆ ಅನ್ನೋದು ನಮಗೆ ಗೊತ್ತಿರಲಿಲ್ಲ ಹೀಗಾಗಿ ಮಾಧ್ಯಮಗಳಲ್ಲಿ ಮಾತನಾಡಲು ನಿರಾಕರಿಸಲಾಗಿತ್ತು ಆದರೆ ಈಗ ಸೂರಜ್ ಚೇತರಿಸಿಕೊಂಡಿರುವ ಕಾರಣ ಮಾತನಾಡುತ್ತಿದ್ದೀವಿ. ಕಾಲು ಮತ್ತು ತೊಡೆ ಮೂಳೆ ಹೋಗಿರುವ ಕಾರಣ 4-5 ಇಂಚು ಗ್ರಾಫ್ಟಿಂಗ್ ಮಾಡಿದ್ದೀವಿ ಹಾಗೂ numerical succession system ಹಾಕಿದ್ದೀವಿ ಇದು ತೊಡೆ ಮೆಂಟೇನ್ ಮಾಡುತ್ತದೆ. ಇನ್ನು ಚಿಕಿತ್ಸೆ ಮುಗಿದಿಲ್ಲ ಇದು ಆರಂಭ ಮುಂಬರುವ ದಿನಗಳಲ್ಲಿ ಸ್ವಲ್ಪ ಸರ್ಜರಿಗಳು ಇದೆ. ಇನ್ಫೆಕ್ಷನ್ ಆಗಬಾರದು ಅನ್ನೋ ಕಾರಣ ಸೂರಜ್‌ನ ನೋಡಲು ಯಾರನ್ನು ಬಿಡುತ್ತಿಲ್ಲ’ ಎಂದು ಡಾಕ್ಟರ್ ಮಾತನಾಡಿದ್ದಾರೆ.