‘ಆದಿಪುರುಷ’ದ ಲಂಕೇಶ; ಸೈಫ್​ ಅಲಿ ಖಾನ್​ ಎಐ ಕಲಾವಿದರ ಕೈಗೆ ಸಿಕ್ಕಾಗ

Lankesh : ಇತ್ತೀಚಿನ ದಿನಗಳಲ್ಲಿ ಎಐ ಕಲಾವಿದರು ಸಾಕಷ್ಟು ಚುರುಕಿನಿಂದ ತಮ್ಮ ಕಲಾಪ್ರೌಢಿಮೆ ಮೆರೆಯುತ್ತಿದ್ದಾರೆ. ಎಲಾನ್​ ಮಸ್ಕ್​ನನ್ನು ಭಾರತೀಯ ಅಳಿಯನನ್ನಾಗಿಸಿದ್ದು, ಮಗುವಾಗಿಸಿದ್ದೂ ನಿಮಗೆ ನೆನಪಿರಬಹುದು. ಹಾಗೆಯೇ ವೃಂದಾವನಕ್ಕೆ ಝ್ಯೂಕರ್​ಬರ್ಗ್​, ಮುಕೇಶ್​ ಅಂಬಾನಿ, ಎಲಾನ್​ ಮಸ್ಕ್​ ಮುಂತಾದ ಪ್ರಸಿದ್ಧರು ಹೋಳಿಯಾಡಲು ಬಂದಿದ್ದೂ. ಇದೀಗ ಆದಿಪುರುಷ ಸಿನೆಮಾದಲ್ಲಿ ಲಂಕೇಶ ಪಾತ್ರಧಾರಿ ಸೈಫ್​ ಅಲಿ ಖಾನ್​ನ ಎಐನಲ್ಲಿ ಸೃಷ್ಟಿಸಿದ್ಧಾರೆ ಈ ಕಲಾವಿದರು. ಭಲೇ ಭಲೇ ಜೈ ರಾವಣ್​! ಸಿನೆಮಾಕ್ಕಿಂತ ಇಲ್ಲಿಯೇ ಈ ರಾವಣನನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ ಎನ್ನುತ್ತಿದ್ದಾರೆ ನೆಟ್ಟಿಗರು.

ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ನಿತ್ಯಜೀವನದ ಪ್ರಮುಖ ಅಂಶ ಎಂಬಂತಾಗಿದೆ. ಡಿಜಿಟಲ್​ ಕಾಲದ ಕಲಾವಿದರಿಗಂತೂ ಇದು ಇನ್ನಿಲ್ಲದ ಹುರುಪು ತುಂಬುತ್ತಿದೆ. ಅಂತೆಯೇ ಟ್ರೆಂಡಿಂಗ್​​ನಲ್ಲಿರುವ ಸೆಲೆಬ್ರಿಟಿಗಳ ಚಿತ್ರಗಳನ್ನು ಮರುರೂಪಿಸುವಲ್ಲಿ ಕಲಾವಿದರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಹಿದ್​ ಎಂಬ ಕಲಾವಿದರ ಸೃಷ್ಟಿಸಿದ ಎಐ ಚಿತ್ರಗಳನ್ನು ಈ ಹಿಂದೆಯೂ ನೀವು ನೋಡಿದ್ದೀರಿ. ಇದೀಗ  ರಾವಣ ಪಾತ್ರಧಾರಿ ಸೈಫ್​ ಅಲಿ ಖಾನ್​ರನ್ನು ಮರುರೂಪಿಸಿದ್ದಾರೆ ಇದೇ ಕಲಾವಿದರು.

ಜೂ. 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು 5,000 ಜನರು ಇಷ್ಟಪಟ್ಟಿದ್ದಾರೆ. ಆದಿಪುರುಷನ ಲಂಕೇಶನಿಗಿಂತಲೂ ಇದು ಅತ್ಯುತ್ತಮವಾಗಿದೆ. ತುಂಬಾ ಅಚ್ಚುಕಟ್ಟಾಗಿ ಕಲೆಯನ್ನು ನಿರ್ವಹಿಸಿದ್ದೀರಿ, ನಿಮಗೆ ಅಭಿನಂದನೆ ಎಂದು ನೆಟ್ಟಿಗರು ಕಲಾವಿದರನ್ನು ಪ್ರಶಂಸಿಸುತ್ತಿದ್ದಾರೆ.