ಹಳ್ಳಿಬೈಲ್ ಪ್ರೌಢಶಾಲೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮೂಲಕ ವಿದ್ಯಾರ್ಥಿ ಸಂಸತ್ ಚುನಾವಣೆ


ಸಿದ್ದಾಪುರ: ತಾಲೂಕಿನ ಗುಡ್ಡಗಾಡು ಪ್ರದೇಶವಾದ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿದ್ಯುನ್ಮಾನ ಮತಯಂತ್ರದ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿ ತಮ್ಮ ಶಾಲಾ ನಾಯಕರನ್ನು ಆಯ್ಕೆಮಾಡಿಕೊಂಡರು . ಈ ಮೂಲಕ ಪ್ರೌಢಶಾಲೆಯಲ್ಲಿ 82 ವಿದ್ಯಾರ್ಥಿಗಳು ಪ್ರಜಾಪ್ರಭುತ್ವದಲ್ಲಿ ಜನನಾಯಕರನ್ನು ಆಯ್ಕೆಮಾಡುವ ಕ್ರಮವನ್ನು ಪ್ರತ್ಯಕ್ಷವಾಗಿ ಕಂಡುಕೊಂಡರು. ವಿದ್ಯಾರ್ಥಿಗಳೇ ಮತಗಟ್ಟೆ ಅಧಿಕಾರಿಗಳಾಗಿ, ರಕ್ಷಣಾ ಸಿಬ್ಬಂದಿಗಳಾಗಿ, ಏಜೆಂಟರಾಗಿ ಸೇವೆ ಸಲ್ಲಿಸಿದ ಅನುಭವ ಪಡೆದುಕೊಂಡರು.
ಮುಖ್ಯಾಧ್ಯಾಪಕ ಚೈತನ್ಯಕುಮಾರ್ ಕೆ.ಎಮ್. ನೇತೃತ್ವದಲ್ಲಿ ನಡೆದ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ಕೀರ್ತಿ ಹೆಗಡೆ ನೇತ್ರತ್ವ ವಹಿಸಿದ್ದರು. ಶಿಕ್ಷಕರಾದ ಗೋಪಾಲ ನಾಯ್ಕ, ರಾಘವೇಂದ್ರ ನಾಯ್ಕ, ಅಪರ್ಣಾ ಶಾಸ್ತ್ರಿ, ಗಣೇಶ ಹೆಗಡೆ, ವಿನಾಯಕ ನಾಯ್ಕ,ಚಂದ್ರಶೇಖರ ನಾಯ್ಕ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದರು. ಮತದಾನ ಮುಗಿದ ನಂತರ ಟಿ.ವಿ. ಪರದೆಯ ಮೇಲೆ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಪ್ರದರ್ಶಿಸಲಾಯಿತು. ಗಣೇಶ ಪರಮೇಶ್ವರ ಗೌಡ ಪ್ರಧಾನಮಂತ್ರಿ, ಭಾಗ್ಯ ಅಣ್ಣಪ್ಪ ನಾಯ್ಕ ಉಪಪ್ರಧಾನ ಮಂತ್ರಿ, ದೇವರಾಜ ಸುಬ್ರಾಯ ನಾಯ್ಕ ಕ್ರೀಡಾ ಮಂತ್ರಿ. ಶ್ರಾವ್ಯ ರಾಜೇಂದ್ರ ನಾಯ್ಕ ಸಾಂಸ್ಕೃತಿಕ, ಪ್ರಜ್ವಲ ನಾಯ್ಕ ಆಹಾರ ಮಂತ