ಇಂದು ಪ್ರಥಮ ಏಕಾದಶಿ. ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣ.. ಆದರೆ ಈ ಮನೆಯಲ್ಲಿ ಘೋರ ದುರಂತವೇ ಸಂಭವಿಸಿದೆ.. ಯುವ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಸೆಲ್ ಫೋನ್ ಉಳಿಸಲು ಹೋಗಿ, ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಟ್ರೈನಿನಲ್ಲಿ ದರೋಡೆಕೋರರು ಎಸಗಿರುವ ದುಷ್ಕೃತ್ಯ ಇದಾಗಿದೆ. ಕಳ್ಳರಿಂದಾಗಿ ಯುವ ಟೆಕ್ಕಿ ಪ್ರಾಣ ಕಳೆದುಕೊಂಡಿದ್ದಾನೆ. ಕಳ್ಳರು ಆತನ ಬಳಿಯಿದ್ದ ಸೆಲ್ ಫೋನ್ ಕಸಿಯಲು ಯತ್ನಿಸಿದಾಗ ಸದರಿ ಸಾಫ್ಟ್‌ವೇರ್ ಇಂಜಿನಿಯರ್ ರೈಲಿನಿಂದ ಜಾರಿ, ಅದೇ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಬೀಬಿ ನಗರದಲ್ಲಿ ನಡೆದಿದೆ. ಮೃತನ ಸ್ವಗ್ರಾಮ ಕಮಲಾಪುರ ಮಂಡಲದ ನೆರೆಲ್ಲ ಗ್ರಾಮದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಘಟನೆಯ ವಿವರ ಇಂತಿದೆ.
ಶ್ರೀಕಾಂತ್ ಹೈದರಾಬಾದ್‌ನ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬಕ್ರೀದ್ ರಜಾ ದಿನ, ಜೊತೆಗೆ ಪ್ರಥಮ ಏಕಾದಶಿ ಇರುವುದರಿಂದ ತಂದೆ-ತಾಯಿಯೊಂದಿಗೆ ಪೂಜೆಯಲ್ಲಿ ಭಾಗವಹಿಸಲು ಮನೆಗೆ ಬರುತ್ತಿದ್ದರು. ಶತವಾಹನ ರೈಲು ಬುಧವಾರ ಸಂಜೆ ಸಿಕಂದರಾಬಾದ್‌ನಿಂದ ಕಾಜಿಪೇಟ್‌ಗೆ ತೆರಳಿತ್ತು. ಬೀಬಿನಗರ ಬಳಿಯ ರೈಲ್ವೆ ಹಳಿ ಬಳಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ದೊಣ್ಣೆಗಳನ್ನು ಹಿಡಿದು ಶ್ರೀಕಾಂತ್ ಅವರ ಸೆಲ್ ಫೋನ್ ಕದಿಯಲು ಯತ್ನಿಸಿದ್ದಾರೆ.
ಫುಟ್ ಬೋರ್ಡ್ ವರೆಗೂ ಇಳಿದು ಬಂದಿದ್ದ ಶ್ರೀಕಾಂತ್ ಅವರ ಕೈಯಲ್ಲಿ ಸೆಲ್ ಫೋನ್ ಇದ್ದಿದ್ದನ್ನು ಗಮನಿಸಿದ ದುಷ್ಕರ್ಮಿಗಳು ನೇರವಾಗಿ ಫೋನ್ ಹಿಡಿದಿದ್ದ ಕೈಗೆ ಹೊಡೆದು ದರೋಡೆಗೆ ಯತ್ನಿಸಿದ್ದಾರೆ. ಗಾಬರಿಗೊಂಡ ಶ್ರೀಕಾಂತ್ ಸೆಲ್ ಫೋನ್ ಉಳಿಸಲು ಯತ್ನಿಸಿ, ರೈಲಿನಿಂದ ಜಾರಿ ಬಿದ್ದಿದ್ದಾನೆ. ದುರದೃಷ್ಟವಶಾತ್ ಅದೇ ರೈಲಿನಡಿಗೆ ಜಾರಿದ ಶ್ರೀಕಾಂತ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ಮೊಬೈಲ್ ದೋಚಲು ಯತ್ನಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಹಬ್ಬಕ್ಕೆ ಮನೆಗೆ ಬರುವ ಮಗನ ಬರುವಿಕೆಗಾಗಿ ಕಾದು ಕುಳಿತಿದ್ದ ಪಾಲಕರಾದ ರಾಮುಲು-ಧನಮ್ಮ ಅವರು ಶ್ರೀಕಾಂತ್ ಸಾವಿನ ಸುದ್ದಿ ಕೇಳಿ ರೋದಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕುಟುಂಬದಲ್ಲಿ ಭೀಕರ ದುರಂತ ಸಂಭವಿಸಿದೆ. ಸೆಲ್ ಫೋನ್ ಕಳ್ಳರ ಅಟ್ಟಹಾಸವೇ ಇಂತಹ ದುಷ್ಕೃತ್ಯಕ್ಕೆ ಕಾರಣವಾಗಿದೆ. ಘಟನೆಯ ಕುರಿತು ರೈಲ್ವೆ ಪೊಲೀಸ್ ಅಧಿಕಾರಿಗಳು ( ಆರ್‌ಪಿಎಫ್) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.