ದಾಂಡೇಲಿ : ನಗರದ ಹಳಿಯಾಳ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಟ್ರಕ್ ಟರ್ಮಿನಲ್ ಹತ್ತಿರ ಯಾರೋ ರಸ್ತೆ ಬದಿಗೆ ಟ್ರೆಂಚ್ ತೆಗೆದಿದ್ದರು. ಇದರಿಂದ ಟ್ರಕ್ಕ್ ಗಳಿಗೆ ಹೋಗಿ ಬರಲು ಕಷ್ಟವಾಗುತ್ತಿರುವುದನ್ನು ಗಮನಿಸಿದ ದಾಂಡೇಲಿ ಟ್ರಾನ್ಸಪೋರ್ಟ್ ಅಸೋಶಿಯೇಶನ್ ವತಿಯಿಂದ ಟ್ರೆಂಚನ್ನು ಮುಚ್ಚುವ ಕಾರ್ಯವನ್ನು ನಡೆಸಲಾಯ್ತು.
ಮಾಹಿತಿಯ ಪ್ರಕಾರ ಟ್ರಕ್ಕಗಳ ನಿಲುಗಡೆಯಾಗಿಯೆ ಮೀಸಲಿರಿಸಲಾದ ಉದ್ದೇಶಿತ ಟ್ರಕ್ ಟರ್ಮಿನಲ್ ಜಾಗದಲ್ಲಿ ಟ್ರಕ್ ಗಳು ನಿಲುಗಡೆ ಮಾಡದಂತೆ ಟ್ರೆಂಚ್ ತೆಗೆಯಲಾಗಿದೆ ಎಂಬ ಆರೋಪ ಕೇಳಿ ಬರತೊಡಗಿದ್ದು, ಇದರ ಜೊತೆಗೆ ಟ್ರಕ್ ಚಾಲಕನೊಬ್ಬನ ಮೇಲೆ ಹಲ್ಲೆಯು ನಡೆದಿತ್ತು ಎಂಬ ಮಾಹಿತಿ ಹೊರಬೀಳುತ್ತಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೂ ಮಾಹಿತಿಯನ್ನು ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಟ್ರಕ್ ಗಳಿಗೆ ಹೋಗಿ ಬರಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದು ದಾಂಡೇಲಿ ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ವತಿಯಿಂದ ಜೆಸಿಬಿ ಮೂಲಕ ಅಗೆದ ಹೊಂಡವನ್ನು ಮುಚ್ಚಿ, ಟ್ರಕ್ ಟರ್ಮಿನಲ್ ಸ್ಥಳವನ್ನು ಸಮತಟ್ಟುಗೊಳಿಸುವ ಕಾರ್ಯವನ್ನು ನಡೆಸಲಾಗಿತ್ತು. ಸ್ಥಳಕ್ಕೆ ಎಎಸೈ ಮೆಹಬೂಬು ನಿಂಬುವಾಲೆಯವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಾಂಡೇಲಿ ಟ್ರಾನ್ಸಪೋರ್ಟ್ ಅಸೋಶಿಯೇಶನಿನ ಅಧ್ಯಕ್ಷರಾದ ದಿನೇಶ್ ಹಳದುಕರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.