ದೆಹಲಿ: ರಾಷ್ಟ್ರ ರಾಜಧಾನಿ ಮೆಟ್ರೋ ಒಂದು ರೀತಿಯಲ್ಲಿ ಮನೆಯಂತಾಗಿದೆ. ಅಲ್ಲಿ ಏನು ಬೇಕಾದರೂ ಮಾಡಬಹುದು. ಕಿಸ್ ಮಾಡುಬಹುದು, ಹಸ್ತಮೈಥುನ ಮಾಡಿಕೊಳ್ಳುಬಹುದು, ಕೊನೆಗೆ ಹೊಡೆದಾಡಿಕೊಳ್ಳಲು ಕೂಡ ಅವಕಾಶ ನೀಡಿದಂತಾಗಿದೆ. ಇನ್ನು ಒಂದು ಬಾಕಿ, ಅಡುಗೆ ಮತ್ತು ಮಲಗುವುದು, ಮತ್ತೆ ಎಲ್ಲ ಚಟುವಟಿಕೆಗಳು ದೆಹಲಿ ಮೆಟ್ರೋದಲ್ಲಿ ನಡೆದಿದೆ. ಇಂತಹ ಸ್ಥಿತಿಗೆ ಏನು ಕಾರಣ, ದೆಹಲಿ ಈ ದೇಶ ರಾಜಧಾನಿ, ಜತೆಗೆ ದೈತ್ಯ ಟಿಕ್ ಕಂಪನಿಗಳು, ಉದ್ಯಮ, ರಾಜಕೀಯ ಚುಟುವಟಿಕೆಗಳಿಗೆ ಹೆಸರುವಾಸಿ ಮತ್ತು ಇಲ್ಲಿನ ಮೆಟ್ರೋ ಜನಬಿಡು, ದೇಶದ ಅತಿ ದೊಡ್ಡ ಮೆಟ್ರೋ ದೆಹಲಿಯದ್ದು, ಆದರೆ ಇಲ್ಲಿ ನಡೆಯುವುದು ಇಂತಹ ಘಟನೆಗಳೆ ಹೆಚ್ಚು. ಇದೀಗ ಇನ್ನೊಂದು ಘಟನೆಗೆ ದೆಹಲಿ ಮೆಟ್ರೋ ಸಾಕ್ಷಿಯಾಗಿದೆ. ಇಬ್ಬರು ವ್ಯಕ್ತಿಗಳು ಮೆಟ್ರೋದ ಒಳಗೆ ಹೊಡೆದಾಡಿಕೊಂಡಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ
ಭಾರತವರ್ಷ ವರದಿ ಮಾಡಿರುವ ಪ್ರಕಾರ ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣದಲ್ಲಿ ಮೆಟ್ರೋ ರೈಲಿನೊಳಗೆ ಈ ಘಟನೆ ನಡೆದಿದೆ. ವೈಲೆಟ್ ಲೈನ್ ಮೆಟ್ರೋ ರಾಜಾ ನಹರ್ ಸಿಂಗ್ನಿಂದ ಕಾಶ್ಮೀರ ಗೇಟ್ ಕಡೆಗೆ ಹೋಗುತ್ತಿದ್ದಾಗ ಈ ಇಬ್ಬರು ಪ್ರಯಾಣಿಕರು ಹೊಡೆದಾಡಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಮೆಟ್ರೋದಲ್ಲಿ ಜನಸಂದಣಿ ಹೆಚ್ಚು, ಈ ಸಮಯದಲ್ಲಿ ತನ್ನ ಬ್ಯಾಗ್ನಿಂದ ವಸ್ತುಗಳನ್ನು ವ್ಯಕ್ತಿಯೊಬ್ಬ ಕದಿಯಲು ಪ್ರಯತ್ನಿಸುತ್ತಿದ್ದ ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ವಾದ ಶುರುವಾಗಿದೆ. ನಂತರ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ನಂತರ ಇಬ್ಬರ ನಡುವೆ ಜೋರಾಗಿ ಹೊಡೆದಾಟ ಶುರುವಾಗಿದೆ. ಇತರ ಪ್ರಯಾಣಿಕರು ಮಧ್ಯೆಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನ ಮಾಡಿದ್ದಾರೆ.